ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ನ್ಯೂಸ್‌ ಕ್ವಿಜ್: ಸ್ವಾಗತಾರ್ಹ ಬೆಳವಣಿಗೆ

Last Updated 10 ನವೆಂಬರ್ 2020, 4:15 IST
ಅಕ್ಷರ ಗಾತ್ರ

ಚಿಕ್ಕಂದಿನಿಂದಲೂ ನಾನು ಪ್ರಜಾವಾಣಿ ಪತ್ರಿಕೆಯನ್ನು ನಿರಂತರವಾಗಿ ಓದುತ್ತಾ ಬಂದಿದ್ದೇನೆ. ಉತ್ತಮ ವಿಷಯ ಮಂಡನೆ, ಭಾಷೆ, ಗುಣಮಟ್ಟದ ಮುದ್ರಣ, ವಿಶ್ವಾಸಾರ್ಹತೆಯಿಂದಾಗಿ ನಾಡಿನ ಜನರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದೆ. ಈಗ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಹೆಚ್ಚೆಚ್ಚು ಪ್ರಜಾವಾಣಿ ಪತ್ರಿಕೆ ಓದುವಂತೆ ನಮ್ಮ ಶಾಲೆಯ ಮಕ್ಕಳಿಗೆ ಪ್ರೇರಣೆ ನೀಡುತ್ತೇವೆ.

-ಡಿ.ಸಿ.ಮೋಹನ್, ಚಿಕ್ಕಬಳ್ಳಾಪುರ ಬಿಜಿಎಸ್‌ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ

***

ವಿಭಿನ್ನ, ವಿಶಿಷ್ಟ ಪ್ರಯತ್ನ

ಪತ್ರಿಕೋದ್ಯಮದ ಇತಿಹಾಸದಲ್ಲಿ ಇದೊಂದು ವಿಭಿನ್ನ ಪ್ರಯೋಗ. ಲಾಕ್‌ಡೌನ್‌ ಹಾಗೂ ಕೋವಿಡ್‌ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಓದು ಮತ್ತು ಬರಹಕ್ಕೆ ಅವಕಾಶವೇ ಇಲ್ಲದಂತೆ ಆಗಿದೆ. ಆನ್‌ಲೈನ್‌ತರಗತಿಗಳ ಸಕ್ರಿಯ ಭಾಗವಹಿಸುವಿಕೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ‌ನ್ಯೂಸ್‌ ಕ್ವಿಜ್‌ ಮೂಲಕಮಕ್ಕಳು, ಪೋಷಕರನ್ನು ಪತ್ರಿಕೆ ಓದಿಗೆ ಹಚ್ಚುವ ಕಾಯಕವನ್ನು 'ಪ್ರಜಾವಾಣಿ’ ಮಾಡುತ್ತಿದೆ. ರಸಪ್ರಶ್ನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೂ ಇದು ಬೆಳಕಿಂಡಿ ಆಗಲಿದೆ.

-ಕೆ.ಎಂ.ನಯಾಜ್ ಅಹಮದ್, ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ

***

ಶ್ಲಾಘನೀಯ ಕಾರ್ಯ

‘ಪ್ರಜಾವಾಣಿ’ಯು ನ.15ರಿಂದ ನ್ಯೂಸ್‌ ಕ್ವಿಜ್ ಪ್ರಾರಂಭಿಸುತ್ತಿರುವುದು ಶ್ಲಾಘನೀಯ ಕಾರ್ಯ. ಕೊರೊನಾ ಸಮಯದಲ್ಲೂ ಇಂತಹ ಮಹತ್ತರ ಕಾರ್ಯಕ್ರಮ ಆಯೋಜಿಸುತ್ತಿರುವುದು ಉತ್ತಮ ಕೆಲಸ. ಲಾಕ್‌ಡೌನ್‌ ಸಮಯದಲ್ಲಿ ಶಾಲಾ–ಕಾಲೇಜು ಆರಂಭವಾಗದೇ, ಮಕ್ಕಳು ಮತ್ತು ಯುವಕರು ಮೊಬೈಲ್ ಚಟಕ್ಕೆ ದಾಸರಾಗಿದ್ದಾರೆ. ದಿನದ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣದಲ್ಲೇ ಕಳೆಯುತ್ತಿದ್ದು, ವಿದ್ಯಾರ್ಥಿಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ಯ ನ್ಯೂಸ್‌ ಕ್ವಿಜ್ ವಿದ್ಯಾರ್ಥಿಗಳು, ಯುವ ಜನರನ್ನು ಆಕರ್ಷಿಸುವುದು ಖಚಿತ.

-ಕೆ.ಎಂ.ರವಿಕುಮಾರ್, ಚಿಕ್ಕಬಳ್ಳಾಪುರ ಎಸ್‌ಜೆಸಿಐಟಿ ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT