ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ 100 ದಿನ ಪಂಚರತ್ನ ಯಾತ್ರೆ: ಗ್ರಾಮ ವಾಸ್ತವ್ಯ ಮಾಡಿದ ಎಚ್‌ಡಿಕೆ

Last Updated 26 ನವೆಂಬರ್ 2022, 4:23 IST
ಅಕ್ಷರ ಗಾತ್ರ

ಸಾದಲಿ: ‘ರಾಜ್ಯದಲ್ಲಿ ಈ ಬಾರಿ ಕನ್ನಡಿಗರಿಂದ ಕನ್ನಡಿಗರಿಗಾಗಿ ಇರುವ ಜನತಾ ಸರ್ಕಾರ ಪ್ರತಿಷ್ಠಾಪನೆ ಆಗಬೇಕು. ಹೀಗಾಗಿ, ಪಂಚರತ್ನ ಯೋಜನೆಯ ಮೂಲಕ ಮುಂದಿನ ನೂರು ದಿನ ರಾಜ್ಯ ಪ್ರವಾಸ ಮಾಡುತ್ತೇನೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಇಲ್ಲಿನ ವೀರಸ್ವಾಮಿ ಸೇವಾ ಟ್ರಸ್ಟ್ ಆವರಣದಲ್ಲಿ ಗ್ರಾಮ ವಾಸ್ತವ್ಯದ ಬಳಿಕ ಮಾತನಾಡಿ, ‘ನಾನು ಕೋಲಾರ ಜಿಲ್ಲೆ ಹಾಗೂ ಚಿಂತಾಮಣಿ, ಶಿಡ್ಲಘಟ್ಟ ಭಾಗದಲ್ಲಿ ಜನರು ತಮ್ಮಪ್ರತಿದಿನದ ಸಮಸ್ಯೆಗಳನ್ನುಹೇಳಿದಾಗ, ಪಂಚರತ್ನ ಯೋಜನೆಯ ಮಹತ್ವ ಮತ್ತು ಅದರ ಪ್ರಭಾವ ತಿಳಿದಿದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಲಬುರಗಿಗೆ ಕಲ್ಯಾಣ ಕರ್ನಾಟಕ ಎಂದು ಹೆಸರಿಡಲಾಗಿದೆ. ಈಗಿನ ಬಿಜೆಪಿ ಸರ್ಕಾರ ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೊಸದಾಗಿ ನಾಮಕಾರಣ ಮಾಡಿದೆ.ಕಲಬುರಗಿಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ವಿದ್ಯಾಥಿ ನಿಲಯವನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಕಳೆದ ಮೂರು ತಿಂಗಳಿಂದ ಬಾಡಿಗೆ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಅಲ್ಲಿ ಓದುತ್ತಿರುವ ಹೆಣ್ಣು ಮಕ್ಕಳನ್ನು ಕಟ್ಟಡದಿಂದ ಹೊರಹಾಕಲಾಗಿದೆ. ಜೊತೆಗೆ ಕೆಲ ಮಕ್ಕಳನ್ನು ಒಳಗೆ ಕೂಡಿ ಹಾಕಲಾಗಿದೆ.ಬೆಳಗಾವಿ ಸಮೀಪದಲ್ಲಿರುವ ಕೆಲವು ಶಾಲೆಗಳಲ್ಲಿ ಕನ್ನಡ ಮಾಧ್ಯಮ ಇಲ್ಲದಿರುವುದರಿಂದಮಕ್ಕಳು ಮರಾಠಿ ಶಾಲೆಗಳು ಸೇರುವ ದುಃಸ್ಥಿತಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಎಂದರು.

ಇದೇ ಕಾರಣಕ್ಕೆ 6000 ಗ್ರಾ. ಪಂ ಗಳಲ್ಲೂ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದರು.

ಆಘಾತ ಸೃಷ್ಟಿಸಿದ ಡಬಲ್ ಎಂಜಿನ್ ಸರ್ಕಾರ!: ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರವು ಕರ್ನಾಟಕಕ್ಕೆ ಅತ್ಯಂತ್ಯ ಆಘಾತಗಳನ್ನು ಸೃಷ್ಟಿಸುತ್ತಿರುವ ಸರ್ಕಾರವಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಾಡಿನ ನೆಲ, ಜಲ ರಕ್ಷಣೆ ಮಾಡಲು ಯೋಗ್ಯ ನಾಯಕನಿಲ್ಲದ ಈ ಸರ್ಕಾರಕ್ಕೆ ಡಬಲ್ ಎಂಜಿನ್ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಆಘಾತ ಸೃಷ್ಟಿಸಿದ ಡಬಲ್ ಎಂಜಿನ್ ಸರ್ಕಾರ!
ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರವು ಕರ್ನಾಟಕಕ್ಕೆ ಅತ್ಯಂತ್ಯ ಆಘಾತಗಳನ್ನು ಸೃಷ್ಟಿಸುತ್ತಿರುವ ಸರ್ಕಾರವಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಾಡಿನ ನೆಲ, ಜಲ ರಕ್ಷಣೆ ಮಾಡಲು ಯೋಗ್ಯ ನಾಯಕನಿಲ್ಲದ ಈ ಸರ್ಕಾರಕ್ಕೆ ಡಬಲ್ ಎಂಜಿನ್ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ನಾನು ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಪಂಚರತ್ನ ಯೋಜನೆ ರೂಪಿಸಿದ್ದು, ರಾಜ್ಯದ ಉದ್ದಗಲಕ್ಕೂ ಈ ಯೋಜನೆಯನ್ನು ಅನುಷ್ಠಾನ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT