ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿನೀರಿನಲ್ಲಿ ಸೀಗಡಿ ಕೃಷಿ: ಲಕ್ಷ ಲೆಕ್ಕದ ಆದಾಯ!

Last Updated 19 ನವೆಂಬರ್ 2020, 1:20 IST
ಅಕ್ಷರ ಗಾತ್ರ
ADVERTISEMENT
""

ಶಿಡ್ಲಘಟ್ಟ: ತಾಲ್ಲೂಕಿನ ಪೂಲಕುಂಟ್ಲಹಳ್ಳಿಯಲ್ಲಿ ಕೃತಕವಾಗಿ ನಿರ್ಮಿಸಿದ ಕೆರೆಯಲ್ಲಿ ರಘುನಾಥರೆಡ್ಡಿ ಅವರು ಸಿಹಿನೀರಿನಲ್ಲಿಯೇ ಸೀಗಡಿ ಬೆಳೆಸಿ ಯಶಸ್ವಿಯಾಗಿದ್ದಾರೆ.

ಕಡಿಮೆ ಸಮಯ ಹಾಗೂ ಖರ್ಚಿನಲ್ಲಿ ಸೀಗಡಿ ಕೃಷಿ ನಡೆಸಿ ಪಡೆದ ಲಾಭದ ಬಗ್ಗೆ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಇದು ಇತರೆ ಬೆಳೆಗಾರರೂ ಇತ್ತ ಪ್ರಯತ್ನಿಸಲು ಪ್ರೇರಣೆಯಾಗಲಿ ಎಂಬುದು ಅವರ ಆಶಯ.

ಸೀಗಡಿ

‘ನಮ್ಮ ತೋಟದಲ್ಲಿ 300 ಅಡಿ ಉದ್ದ, 100 ಅಡಿ ಅಗಲದ ಹೊಂಡದ ಸಿಹಿನೀರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ಸೀಗಡಿ ಬೆಳೆಸಲು ಪ್ರಾರಂಭ ಮಾಡಿದೆ. ನೆಲ್ಲೂರಿನಿಂದ ಎರಡು ಲಕ್ಷ ಮರಿಗಳನ್ನು ತರಿಸಿದ್ದೆವು. ಅವಕ್ಕೆ ಆಹಾರವಾಗಿ ಫೀಡ್ ಕೊಡುತ್ತಿದ್ದೆವು. ನೂರು ದಿನಗಳಲ್ಲಿ 4,500 ಕೆ.ಜಿಯಷ್ಟು ಸೀಗಡಿ ಸಿಕ್ಕಿದೆ. ನೆಲ್ಲೂರಿನವರೇ ಒಂದು ಕೆ.ಜಿಗೆ ₹ 300 ರಂತೆ ಖರೀದಿಸುತ್ತಿದ್ದಾರೆ. ನನಗೆ ₹ 5 ಲಕ್ಷ ಖರ್ಚು ಬಂದಿತು. ₹ 13 ಲಕ್ಷ ಆದಾಯ ಬಂದಿದೆ’ ಎಂದು ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ತಿಳಿಸಿದರು.

‘ರೈತರಿಗೆ ಸೀಗಡಿ ಕೃಷಿ ಬಹಳ ಅನುಕೂಲಕರ ಮತ್ತು ಆದಾಯಕರ. ಸೀಗಡಿಗೆ ತುಂಬಾ ಬೇಡಿಕೆಯಿದೆ. ಮಂಗಳೂರು, ಕೊಡಗು, ಕಲಬುರ್ಗಿ, ಬಳ್ಳಾರಿ ಹೊರತುಪಡಿಸಿದರೆ ಬೇರೆ ಜಿಲ್ಲೆಗಳಲ್ಲಿ ಸೀಗಡಿ ಬೆಳೆದು ಯಶಸ್ಸು ಕಂಡವರು ವಿರಳ. ನಮ್ಮ ಜಿಲ್ಲೆಯಲ್ಲಂತೂ ಯಾರೂ ಇದನ್ನು ಬೆಳೆದಿಲ್ಲ’ ಎನ್ನುತ್ತಾರೆ ಅವರು.

‘ನಾನು ಧೈರ್ಯ ಮಾಡಿ ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ. ಇದರಿಂದ ಉತ್ಸಾಹ ಇಮ್ಮಡಿಸಿದ್ದು, 60X60 ಮೀ. ಅಗಲದ ಕೊಳದಲ್ಲಿ ಶೀಟ್ ಹಾಕಿ, ಉಷ್ಣತೆ ಕಾಪಾಡಿಕೊಂಡು, ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಳ್ಳಲು ಫ್ಯಾನ್ ವ್ಯವಸ್ಥೆ ಮಾಡುತ್ತಿದ್ದೇನೆ. ಆಗ ಇನ್ನೂ ಉತ್ಪಾದನೆ, ಗುಣಮಟ್ಟ ಹೆಚ್ಚಲಿದೆ. ಆಗ ವರ್ಷಕ್ಕೆ ಮೂರು ಬೆಳೆ ತೆಗೆಯಬಹುದು. ಅದರಲ್ಲಿ 8 ಲಕ್ಷ ಮರಿಗಳನ್ನು ಬಿಟ್ಟು 15 ಟನ್ ಸೀಗಡಿಯ ಉತ್ಪಾದನೆ ಮಾಡಬಹುದು’ ಎಂಬುದು ಅವರ ವಿವರಣೆ.

ರಘುನಾಥರೆಡ್ಡಿ ಅವರ ಮೊಬೈಲ್94836 94017.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT