ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲಾ ಶುಲ್ಕ ರದ್ದುಪಡಿಸಿ: ಮನವಿ

Last Updated 7 ಏಪ್ರಿಲ್ 2021, 5:06 IST
ಅಕ್ಷರ ಗಾತ್ರ

ಚೇಳೂರು: ‘ಕೊರೊನಾ ಸೋಂಕಿನ ಸಂಕಷ್ಟದ ಮಧ್ಯೆ ಖಾಸಗಿ ಶಾಲೆಗಳು ಪೋಷಕರನ್ನು ಶಾಲಾ ಶುಲ್ಕ ಕಟ್ಟುವಂತೆ ಪೀಡಿಸುತ್ತಿವೆ. ಸರ್ಕಾರ ನಿಗದಿಪಡಿಸಿರುವ ಶೇ 70ರಷ್ಟು ಶುಲ್ಕವನ್ನು ರದ್ದು ಮಾಡಬೇಕು’ ಎಂದು ಚೇಳೂರಿನ ಮಕ್ಕಳ ಪೋಷಕರ ಪರವಾಗಿ ರೈತ ಸಂಘದಅಧ್ಯಕ್ಷ ಬೈರಪ್ಪನಹಳ್ಳಿ ಆರ್. ಶಿವಾರೆಡ್ಡಿ, ಕ.ರ.ವೇ. ಜಿಲ್ಲಾ ಸಂಚಾಲಕ ಜ್ಯೋ.ವೆಂ.ಚಲಪತಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಂಟಿ ಹೇಳಿಕೆ ನೀಡಿರುವ ಅವರು, ‘ಖಾಸಗಿ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಒತ್ತಾಯ ಮಾಡುವುದು ಸರಿಯಲ್ಲ. ಸರ್ಕಾರಗಂಭೀರವಾಗಿ ಚರ್ಚೆ ಮಾಡಿ ಶೇ 70ರಷ್ಟು ಶುಲ್ಕ ಪಾವತಿ ಮಾಡುವಂತೆ ಸೂಚನೆ ನೀಡಿರುವುದು ಸಹಅವೈಜ್ಞಾನಿಕ. ಸಾಮಾನ್ಯ ಜನತೆ ಹೋಟೆಲ್, ಹೂವಿನ ವ್ಯಾಪಾರ, ಆಟೋ ಚಾಲನೆ ಮಾಡಿ, ಕೂಲಿ ಮಾಡಿ ಮನೆ ಬಾಡಿಗೆ ಕಟ್ಟಿ -ಹೆಂಡತಿ ಮಕ್ಕಳನ್ನ ಪೋಷಿಸುವುದೇ ದೊಡ್ಡ ಸವಾಲಾಗಿದೆ. ಇಂತಹ ಸಮಯದಲ್ಲಿ ಶಾಲಾ ಶುಲ್ಕ ಪಾವತಿಸುವುದು ಕಷ್ಟ’ ಎಂದಿದ್ದಾರೆ.

‘ಆರ್ಥಿಕ ಶೋಷಣೆಗೆತುತ್ತಾಗುವ ಬದಲು ಖಾಸಗಿ ಶಾಲೆಗಳವರು ಟಿ.ಸಿ. ಕೊಡಲಿ. ಸರ್ಕಾರಿ ಶಾಲೆಗಳಲ್ಲಿ ಸೇರಿಸುತ್ತೇವೆ. ಒಂದು ವರ್ಷದಿಂದ ಆರ್ಥಿಕವಾಗಿ ಹಿಂದುಳಿದಿರುವ ಜೊತೆಗೆ ಸರ್ಕಾರಗಳು ಇತ್ತೀಚೆಗೆ ಪೆಟ್ರೋಲ್, ಅಡುಗೆ ಅನಿಲ ಮುಂತಾದ ದಿನ ಬಳಕೆ ವಸ್ತುಗಳನ್ನು ಗಗನಕ್ಕೇರಿಸಿವೆ. ಬಡಜನರ ಜೀವಗಳ ಜೊತೆ ಆಡವಾಡುತ್ತಿವೆ’ ಎಂದು ಆರೋಪಿಸಿದ್ದಾರೆ.

‘ಶಾಲೆಗಳ ಶುಲ್ಕವನ್ನು ರದ್ದು
ಗೊಳಿಸದಿದದರೆ ಪೋಷಕರೊಂದಿಗೆ ಹೋರಾಟಕ್ಕೆ ಇಳಿಯಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಶಂಕರಪ್ಪ, ವೆಂಕಟರವಣಪ್ಪ, ರಾಮರೆಡ್ಡಿ, ಸುಬ್ರಮಣಿ, ಸನಾವುಲ್ಲಾ, ಮಂಜುನಾಥ ಅವರೂ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT