ಶಿಡ್ಲಘಟ್ಟ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಮತ್ತು ರಾಜಕೀಯವಾಗಿ ಜಟಾಪಟಿಗೆ ಕಾರಣವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ತಾಲ್ಲೂಕಿನ ಬಶೆಟ್ಟಿಹಳ್ಳಿಯಿಂದ ಸೋಮವಾರ ಸಂಜೆಯಿಂದ ಆರಂಭವಾಯಿತು.

ಆದರೆ, ಸಮೀಕ್ಷೆ ನಡೆಸುವ ಗಣತಿದಾರರಿಗೆ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ ಸಮೀಕ್ಷೆ ಪ್ರಕ್ರಿಯೆಯು ಕೆಲಹೊತ್ತು ಗೊಂದಲಗಳ ಗೂಡಾಗಿ ಪರಿವರ್ತನೆಯಾಯಿತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಕ್ಟೋಬರ್ 7ರವರೆಗೆ ನಡೆಯಲಿರುವ ಈ ಸಮೀಕ್ಷೆಗೆ ತಾಲ್ಲೂಕು ಆಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕಾರ್ಯಕ್ಕಾಗಿ 550 ಶಿಕ್ಷಕರನ್ನು ನಿಯೋಜಿಸಿಕೊಳ್ಳಲಾಗಿದೆ. ಗಣತಿದಾರರಿಗೆ ನಿಯೋಜನೆಗೊಂಡ ಶಿಕ್ಷಕರಿಗೆ 2 ದಿನ ತರಬೇತಿ ನೀಡಲಾಗಿದೆ. ಅಲ್ಲದೆ, ಹಿರಿಯ ಅಧಿಕಾರಿಗಳನ್ನು ಒಳಗೊಂಡ ಮೇಲ್ವಿಚಾರಣಾ ಸಮನ್ವಯ ಸಮಿತಿಯನ್ನೂ ರಚಿಸಲಾಗಿದೆ.

ಆದರೆ ಗಣತಿದಾರಿಗೆ ಮೊಬೈಲ್ ಆ್ಯಪ್ ಸಿಗಲಿಲ್ಲ. ಮಾಹಿತಿ ಕೂಡ ಸರಿಯಾದ ಸಮಯಕ್ಕೆ ತಲುಪಲಿಲ್ಲ. ಇದರಿಂದ ಗೊಂದಲಕ್ಕೀಡಾದ ಗಣತಿದಾರರು ಸಮೀಕ್ಷೆ ಮಾಡುವ ಗೋಜಿಗೆ ಹೋಗಲಿಲ್ಲ. ಸಮೀಕ್ಷೆ ರದ್ದುಪಡಿಸುವಂತೆ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆಯಾಗಿದ್ದು, ಅದರ ವಿಚಾರಣೆ ಸೆ. 23ಕ್ಕೆ ಮುಂದೂಡಲಾಗಿದೆ. ಹೀಗಾಗಿ, ಗಣತಿ ನಡೆಯಲಿದೆಯೇ ಅಥವಾ ಸ್ಥಗಿತಗೊಳ್ಳಲಿದೆಯೇ ಎಂಬುದು ನ್ಯಾಯಾಲಯದ ತೀರ್ಪಿನ ಮೇಲೆ ನಿಂತಿದೆ.

ಆಯಾ ಸಮುದಾಯಗಳು ಗಣತಿದಾರರು ಮನೆಗೆ ಬಂದಾಗ ಧರ್ಮ, ಜಾತಿ, ಕುಲ ಕಸುಬು ಕಾಲಂನಲ್ಲಿ ಏನೆಲ್ಲಾ ಮಾಹಿತಿ ನೀಡಬೇಕು ಎಂಬ ಜಾಗೃತಿ ಮೂಡಿಸುವ ಕಾರ್ಯವೂ ಕೆಲವು ದಿನಗಳಿಂದ ನಿರಂತರವಾಗಿ ನಡೆಸಲಾಗಿತ್ತು. ಗಣತಿದಾರರು ಮನೆ ಮನೆಗೆ ಸಮೀಕ್ಷೆಯ ಸ್ಟಿಕ್ಕರ್ ಅನ್ನು ಕೆಲವು ದಿನಗಳ ಮುಂಚೆಯೇ ಅಂಟಿಸಲಾಗಿತ್ತು.

ಆದರೆ, ಕೆಲವು ತಾಲ್ಲೂಕಿನ ಗ್ರಾಮಗಳಲ್ಲಿ ಸೆ.22ರಂದು ಸಮೀಕ್ಷೆಯ ಗಣತಿದಾರರು ಯಾರೊಬ್ಬರ ಮನೆಗೂ ಭೇಟಿ ನೀಡಲಿಲ್ಲ. ಗಣತಿ ಕಾರ್ಯ ನಡೆಯಲಿಲ್ಲ. ಇದರಿಂದ ಸಾರ್ವಜನಿಕರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ನಡೆಯುವುದೇ ಅಥವಾ ಇಲ್ಲವೇ ಎನ್ನುವ ಅನುಮಾನ ಮತ್ತು ಗೊಂದಲಗಳು ಮೂಡಿದವು.

‘ಸಮೀಕ್ಷೆಗೆ ಅಗತ್ಯ ಮಾಹಿತಿ ನೀಡಿ’

ತಾಲ್ಲೂಕಿನ ಬಶೆಟ್ಟಹಳ್ಳಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಹಶೀಲ್ದಾರ್ ಗಗನ ಸಿಂಧು ಅವರು ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಅ.7ರವರೆಗೆ ಸಮೀಕ್ಷೆ ನಡೆಯಲಿದೆ. ಪ್ರತಿ ಮನೆ ಸಮೀಕ್ಷೆಗೆ ಸುಮಾರು 45 ನಿಮಿಷ ಸಮಯ ಹಿಡಿಯಲಿದೆ. ಗಣತಿದಾರರು ಮನೆ ಬಳಿ ಬಂದಾಗ ಪಡಿತರ ಚೀಟಿ ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ ಸಂಯೋಜನೆಗೊಂಡ ಮೊಬೈಲ್ ಸಂಖ್ಯೆ ಇರಬೇಕು. ಸಮೀಕ್ಷೆಗೆ ಅಗತ್ಯವಿರುವ ಮಾಹಿತಿ ಮತ್ತು ದಾಖಲೆಗಳನ್ನು ಜನರು ನೀಡಬೇಕು ಎಂದು ಮನವಿ ಮಾಡಿದರು. ಬಿಇಒ ನರೇಂದ್ರ ಕುಮಾರ್ ಬಿಸಿಎಂ ಇಲಾಖೆ ಅಧಿಕಾರಿ ನವೀನ್ ಕುಮಾರ್ ಗಣತಿದಾರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.