ರಾಜಕಾಲುವೆಯಿಂದ ತೆಗೆದ ಹೂಳು ಮಣ್ಣನ್ನು ಗೌಡನಕೆರೆಗೆ ಸುರಿಯುತ್ತಿರುವುದು
ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ
ಈಗಾಗಲೇ ಗೌಡನಕೆರೆಯನ್ನು ಹಲವು ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಜಾಲಿ ಗಿಡಗಳು ಸಾಕಷ್ಟು ಕೆರೆಯನ್ನು ಆಕ್ರಮಿಸಿಕೊಂಡಿದೆ. ಉಳಿದಿರುವ ಕೆರೆಯನ್ನು ತ್ಯಾಜ್ಯ ಸುರಿಯುತ್ತಾ ಹಾಳುಮಾಡುತ್ತಿದ್ದಾರೆ. ಕೆರೆಯನ್ನು ಮುಚ್ಚಿ ರಸ್ತೆ ಅಗಲ ಮಾಡಲು ಗುತ್ತಿಗೆದಾರನಿಗೆ ಅನುಮತಿ ಕೊಟ್ಟವರು ಯಾರು. ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಭಕ್ತರಹಳ್ಳಿ ಬೈರೇಗೌಡ ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಶಾಸಕರ ಹೆಸರು ದುರ್ಬಳಕೆ ಶಾಸಕ ಬಿ.ಎನ್.ರವಿಕುಮಾರ್ ಅವರು ಶಾಸಕರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಸ್ವಂತ ಹಣ ಖರ್ಚು ಮಾಡಿ ನಗರದ ಹೊರವಲಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 234ರ ಅಕ್ಕ ಪಕ್ಕದಲ್ಲಿ ಗುಡ್ಡೆಬಿದ್ದಿದ್ದ ಕಟ್ಟಡಗಳ ಅವಶೇಷ ವಿಲೇವಾರಿ ಮಾಡಿ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೀಗ ಮತ್ತೆ ಹೆದ್ದಾರಿ ಅಂಚಿನ ಗೌಡನಕೆರೆಗೆ ಹೂಳು ತ್ಯಾಜ್ಯದ ಮಣ್ಣನ್ನು ತುಂಬಿಸಲಾಗುತ್ತಿದೆ. ರಸ್ತೆಯಂಚಿನಲ್ಲಿ ಮಣ್ಣನ್ನು ತೆಗೆಸಿದ ಶಾಸಕರ ಹೆಸರನ್ನು ಗುತ್ತಿಗೆದಾರರು ದುರ್ಬಳಕೆ ಮಾಡಿಕೊಂಡರೆ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡತೊಡಗಿದೆ.