ಶಿಡ್ಲಘಟ್ಟ: ಗ್ರಾಮೀಣ ಭಾಗದಲ್ಲಿ ಕೃಷಿಕರ ಬದುಕಿನಲ್ಲಿ ಸಹಕಾರ ಬ್ಯಾಂಕುಗಳ ಪಾತ್ರ ಬಹಳ ಮುಖ್ಯ. ವಾಣಿಜ್ಯ ಮತ್ತು ರಾಷ್ಟ್ರೀಯ ಬ್ಯಾಂಕುಗಳಿಗಿಂತ ಸಹಕಾರಿ ಸೇವಾ ಬ್ಯಾಂಕುಗಳು ರೈತರಿಗೆ ಹೆಚ್ಚು ಹತ್ತಿರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಸಾದಲಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರನ್ನು ತಮ್ಮ ಗೃಹ ಕಚೇರಿಯಲ್ಲಿ ಭೇಟಿ ಮಾಡಿದರು.

ಸಹಕಾರಿ ಬ್ಯಾಂಕ್ಗಳು ಮಹಿಳಾ ಸ್ವ–ಸಹಾಯ ಸಂಘಗಳ ಸದಸ್ಯರು, ಕೃಷಿಕರಿಗೆ ಕಡಿಮೆ ಬಡ್ಡಿಗೆ ಮತ್ತು ಬಡ್ಡಿ ರಹಿತವಾಗಿ ಬೆಳೆ ಸಾಲ ನೀಡುತ್ತವೆ. ಚುನಾವಣೆ ವೇಳೆ ರಾಜಕೀಯ ಮಾಡೋಣ. ಚುನಾವಣೆ ಮುಗಿದ ಮೇಲೆ ಎಲ್ಲರೂ ಒಂದೇ. ಸಹಕಾರಿ ಬ್ಯಾಂಕುಗಳಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳುವ ಜವಾಬ್ದಾರಿ ಗೆದ್ದ ನಿರ್ದೇಶಕರದ್ದಾಗಿರುತ್ತದೆ ಎಂದರು.

ಈ ಹಿಂದೆ ಸಾದಲಿ ಸಹಕಾರಿ ಬ್ಯಾಂಕು ಕಾಂಗ್ರೆಸ್ ಬೆಂಬಲಿತರ ಪಾಲಾಗಿತ್ತು. ಅವರ ಆಡಳಿತದಿಂದ ಬೇಸತ್ತ ಮತದಾರರು ಇದೀಗ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ನೀಡಿದ್ದು, ಅವರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಸಿ.ಅಶ್ವತ್ಥಪ್ಪ, ಕೆ.ಉಮಾಶಂಕರ್, ಆರ್.ತ್ಯಾಗರಾಜ್, ಮಂಜುಳಮ್ಮ, ಸುಬ್ಬರತ್ನಮ್ಮ, ನರಸಿಂಹಮೂರ್ತಿ, ಎಸ್.ಎಲ್. ಅಶ್ವತ್ಥನಾರಾಯಣ್, ವೆಂಕಟೇಶ್, ಎಸ್.ಕೃಷ್ಣಾರೆಡ್ಡಿ, ಕೆ.ವಿ.ನಂಜಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.