ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಗೆ ದಾಖಲೆಗಳಿಗಾಗಿ ಅಲೆದಾಡಬೇಕಾಗಿರುವುದು ಸಾಮಾನ್ಯ ಎನ್ನುವಂತಾಗಿದೆ. ನಗರಸಭೆಯಿಂದ ದಾಖಲೆಗಳನ್ನು ಪಡೆಯಲು ನಾಗರಿಕರು ಪದೇ ಪದೇ ಕಚೇರಿ ಮೆಟ್ಟಿಲು ಹತ್ತಬೇಕು.

ಆದರೆ ಅಚ್ಚರಿ ಎನ್ನುವಂತೆ ಚಿಕ್ಕಬಳ್ಳಾಪುರ ನಗರಸಭೆಯ ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅರ್ಜಿ ನೀಡಿದ ದಿನವೇ ಕಾರ್ಯಾದೇಶವನ್ನೂ ನೀಡಲಾಗಿದೆ! ಹೀಗೆ ಒಂದೇ ದಿನದಲ್ಲಿಯೇ ಪ್ರಕ್ರಿಯೆಗಳು ಪೂರ್ಣವಾಗಿದೆ.

‘ಈ ನಡೆ ಆಶ್ಚರ್ಯ ಹಾಗೂ ಸಂಶಯಕ್ಕೆ ಎಡೆ ಮಾಡುತ್ತದೆ’ ಎಂದು ನಗರಸಭೆ ಮಾಜಿ ಸದಸ್ಯ ಮಹಮ್ಮದ್ ಸಾದಿಕ್ ಅವರು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ. ‘ಬೀದಿ ದೀಪಗಳ ನಿರ್ವಹಣೆಯಲ್ಲಿ ಗೋಲ್ಮಾಲ್ ನಡೆದಿದೆ’ ಎಂದು ಆರೋಪಿಸಿರುವ ಅವರು ಈ ಸಂಬಂಧ ಬಿಡುಗಡೆಯಾಗಿರುವ ಮೊತ್ತ ಮತ್ತಿತರ ದಾಖಲೆಗಳನ್ನು ದೂರಿನೊಂದಿಗೆ ಅಡಕಗೊಳಿಸಿದ್ದಾರೆ. ಈ ಬೀದಿ ದೀಪಗಳ ನಿರ್ವಹಣೆಯ ಗುತ್ತಿಗೆ ವಿಚಾರದಲ್ಲಿ ಸದಸ್ಯ ರಫೀಕ್ ಅವರ ಪಾತ್ರವೂ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಗುತ್ತಿಗೆದಾರರು ಕೆಲಸ ಪ್ರಾರಂಭಕ್ಕೆ ನೀಡಬೇಕಾದ ಬ್ಯಾಂಕ್ ಗ್ಯಾರೆಂಟಿ, ಕರಾರು ಪತ್ರ, ವಾಹನದ ವಿವರಗಳು, ಕಚೇರಿ ವಿಳಾಸ, ದೂರವಾಣಿ ಸಂಖ್ಯೆ ಕೂಡಾ ಪಡೆಯದೆ ಅರ್ಜಿಯನ್ನು ಪಡೆದ ದಿನವೇ ಕಾರ್ಯಾದೇಶ ನೀಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕಾನೂನಿನ ಉಲ್ಲಂಘನೆಯೂ ಆಗಿದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ದೂರಿನಲ್ಲಿ ಏನಿದೆ: ಚಿಕ್ಕಬಳ್ಳಾಪುರ ನಗರದ 1ರಿಂದ 31 ವಾರ್ಡ್ಗಳಲ್ಲಿ ಬೀದಿ ದೀಪಗಳ ವಾರ್ಷಿಕ ನಿರ್ವಹಣೆ ಮಾಡಲು ಅವಶ್ಯಕತೆಗೆ ಅನುಗುಣವಾಗಿ ಅಂದಾಜು ಪಟ್ಟಿಯನ್ನು 2021ರ ಜೂ.29ರಂದು ತಯಾರಿಸಲಾಗಿದೆ. 2021ರ ಜು.23ರಂದು ಬೆಂಗಳೂರಿನ ಗಂಗಾನಗರದ ಚೈತನ್ಯ ಎಲೆಕ್ಟ್ರಿಕಲ್ಸ್ನವರು ಟೆಂಡರ್ ಪಡೆದಿದ್ದಾರೆ. ಚೈತನ್ಯ ಎಲೆಕ್ಟ್ರಿಕಲ್ಸ್ನವರು 2021–22ರ ಒಂದು ವರ್ಷದ ಅವಧಿಗೆ ಮಾತ್ರ ಕಾರ್ಯಾದೇಶ ಪಡೆದಿದ್ದಾರೆ.

2021ರ ಡಿಸೆಂಬರ್ನಿಂದ 2022ರ ಅಕ್ಟೋಬರ್ 14ರವರೆಗೆ ತೆರಿಗೆಗಳನ್ನು ಕಡಿತಗೊಳಿಸಿ ಬಿಲ್ಗಳನ್ನು ನಗರಸಭೆಯು ಪಾವತಿಸಿದೆ. ಆದರೆ 2022ರ ಅಕ್ಟೋಬರ್ 15ರಿಂದ ಡಿಸೆಂಬರ್ 14ರವರೆಗೆ ₹ 4,9,920 ಹಣವನ್ನು ತೆರಿಗೆ ಕಡಿತಗೊಳಿಸದೆಯೇ ಪಾವತಿಸಲಾಗಿದೆ.

ಟೆಂಡರ್ ಅವಧಿ 2022ರ ನ.14ಕ್ಕೆ ಮುಗಿದಿದ್ದರೂ 2022ರ ನ.15ರಿಂದ 2022ರ ಡಿ.14ರವರೆಗೆ ಹೊಸದಾಗಿ ಟೆಂಡರ್ ಕರೆಯದೆ ₹ 2,04,736 ಅನ್ನು ಕಾರ್ಯಾದೇಶವಿಲ್ಲದೆ ಪಾವತಿಸಿದ್ದಾರೆ ಎಂದು ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಸಾದಿಕ್ ಉಲ್ಲೇಖಿಸಿದ್ದಾರೆ.

ಹೊಸದಾಗಿ ಟೆಂಡರ್ ಕರೆಯಲು ಮತ್ತು ಹೊಸ ಟೆಂಡರ್ ಪ್ರಕ್ರಿಯೆ ಮುಗಿಯುವವರೆಗೂ ಹಾಲಿ ಗುತ್ತಿಗೆದಾರರನ್ನು ಮುಂದುವರಿಸಲು ನಗರಸಭೆ ಅನುಮೋದನೆ ನೀಡಿದೆ. 2021ರ ಡಿ.15ರಂದು ನೀಡಿರುವ ಕಾರ್ಯಾದೇಶವನ್ನು ಮುಂದುವರಿಸಿ ಪೌರಾಯುಕ್ತರು ಆದೇಶಿಸಿದ್ದಾರೆ.

ಗುತ್ತಿಗೆದಾರರು ಕೆಲಸ ಪ್ರಾರಂಭಕ್ಕೆ ಮೊದಲು ಅವಶ್ಯವಾಗಿ ನೀಡಬೇಕಾದ ಬ್ಯಾಂಕ್ ಗ್ಯಾರಂಟಿ, ವಾಹನಗಳ ವಿವರಗಳು, ಕಚೇರಿಯ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೂಡಾ ಪಡೆಯದೆ ದಿನಪತ್ರಿಕೆಗಳಲ್ಲಿ ಪ್ರಚುರಪಡಿಸದೆ ಇರುವುದು ಕಾನೂನಿನ ಉಲ್ಲಂಘನೆ ಆಗುತ್ತದೆ.

2022ರ ಡಿ.15ರಿದ 2023ರ ಫೆ.14ರವರೆಗೆ ನಗರಸಭೆಯು ಯಾವುದೇ ತೆರಿಗೆ ಕಡಿತಗೊಳಿಸದೆ ₹ 4,07,568 ಬಿಲ್ ಪಾವತಿಸಬೇಕಾಗಿತ್ತು. ಆದರೆ ಹೆಚ್ಚುವರಿಯಾಗಿ ಅಂದರೆ ₹ 3,76,354 ಪಾವತಿಸಿದೆ. ಒಟ್ಟು ₹ 7,83,922 ಪಾವತಿಸಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಹೀಗೆ ಪ್ರತಿ ತಿಂಗಳು ನಗರಸಭೆಯು ಬೀದಿ ದೀಪ ನಿರ್ವಹಣೆ ಗುತ್ತಿಗೆದಾರರಿಗೆ ನೀಡಿರುವ ಬಿಲ್ಗಳು, ಮೊತ್ತ, ತೆರಿಗೆ ಕಡಿತದ ವಿವರಗಳ ಮಾಹಿತಿಯನ್ನು ಅಡಕಗೊಳಿಸಿ ಮಾಜಿ ಸದಸ್ಯರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

2024–25ನೇ ಸಾಲಿನಲ್ಲಿ ನಗರ ವ್ಯಾಪ್ತಿಯ 31 ವಾರ್ಡ್ಗಳಲ್ಲಿ ಎಲ್ಇಡಿ ಲೈಟ್ಗಳು ಮತ್ತು ಕ್ಲಾಂಪ್ಗಳ ಖರೀದಿಗೆ ₹ 7,76,440 ಬಿಲ್ ಪಾವತಿಸಲಾಗಿದೆ. ಇ–ಪ್ರಕ್ಯೂರ್ಮೆಂಟ್ ಪ್ರಚುರವನ್ನು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಿಸದೆ ಖರೀದಿಸಲಾಗಿದೆ. ದಾಸ್ತಾನುವಹಿ ಹಾಗೂ ಅದಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಬೇಕು ಎಂದೂ ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.

‘ಕಚೇರಿಯೇ ಇಲ್ಲ’

‘ಬೀದಿ ದೀಪ ನಿರ್ವಹಣೆಯ ಗುತ್ತಿಗೆದಾರರು ನಗರದಲ್ಲಿ ಕಚೇರಿ ತೆರೆಯಬೇಕು. ದೂರವಾಣಿ ಸಮೇತ ವಿವರಗಳನ್ನು ನೀಡಬೇಕು. ಸಾರ್ವಜನಿಕರು ದೂರು ನೀಡಲು ಸಾಧ್ಯ ಆಗುವಂತೆ ಪತ್ರಿಕಾ ಪ್ರಕಟಣೆ ನೀಡಬೇಕು. ಆದರೆ ಈ ಯಾವ ಪ್ರಕ್ರಿಯೆಯೂ ಆಗಿಲ್ಲ. ಗುತ್ತಿಗೆದಾರರು ಎರಡು ವಾಹನಗಳನ್ನು ಹೊಂದಿರಬೇಕು. ಆದರೆ ಒಂದು ವಾಹನ ಮಾತ್ರವೇ ಇದೆ’ ಎಂದು ಮಹಮ್ಮದ್ ಸಾದಿಕ್ ತಿಳಿಸಿದ್ದಾರೆ.

ಬಿ.ಬಿ ರಸ್ತೆಯಲ್ಲಿ ಬೀದಿ ದೀಪಗಳ ಅಧ್ವಾನ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆಯಲ್ಲಿನ ಬೀದಿ ದೀಪಗಳ ಅಧ್ವಾನ ಅಧಿಕವಾಗಿದೆ. ಬೀದಿ ದೀಪಗಳು ಬೆಳಗದ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ್ಗೆ ವರದಿಗಳು ಪ್ರಕಟವಾದರೂ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ನಗರಸಭೆ ವರ್ತಿಸುತ್ತದೆ. ‘ನೀವು ಏನಾದರೂ ಬರೆದುಕೊಳ್ಳಿ ಸುದ್ದಿ ಮಾಡಿ ನಾವು ಇರುವುದೇ ಹೀಗೆ’ ಎನ್ನುವಂತಿದೆ ನಗರಸಭೆ ಅಧಿಕಾರಿಗಳ ನಿಲುವು. ಬಿ.ಬಿ ರಸ್ತೆಯ ಬೀದಿ ದೀಪಗಳಲ್ಲಿ ಕೆಲವು ಬೆಳಗಿದರೆ ಕೆಲವು ಬೆಳಕು ನೀಡುತ್ತಿಲ್ಲ. ನಗರದಲ್ಲಿ ಬೀದಿ ದೀಪ ನಿರ್ವಹಣೆಯ ಅಧ್ವಾನಗಳು ಸಾಕಷ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.