ಸೋಮವಾರ, ಜನವರಿ 18, 2021
21 °C

ಫುಲೆ ಹೋರಾಟ ಸ್ಮರಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಸಮಾಜದಲ್ಲಿನ ಅನಿಷ್ಟ ಪದ್ಧತಿಗಳಲ್ಲಿ ತೊಡೆದುಹಾಕಿ ಶಿಕ್ಷಣದಲ್ಲಿ ಸಮಾನತೆಯನ್ನು ಕಲ್ಪಿಸಿದ ದೇಶದ ಮೊದಲ ಶಿಕ್ಷಕಿ ಸಾವಿಬಾಯಿ ಫುಲೆಯವರ ಹೋರಾಟ ಸ್ಮರಣೀಯ ಎಂದು ತಾಲ್ಲೂಕಿನ ಆಚೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸುಬ್ರಮಣ್ಯಂ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕಚೇರಿಗಳ ಸಹಯೋಗದೊಂದಿಗೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಸಂಘದಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ 190ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿತ್ರಿಬಾಯಿ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಆಧುನಿಕ ಮಹಿಳೆಯರ ಹೊಸ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. 17ನೇ ಶತಮಾನದಲ್ಲಿ ದೇಶದಲ್ಲಿ ಸಂಭವಿಸಿದ ಸಮಾಜ ಸುಧಾರಣಾ ಪ್ರಕ್ರಿಯೆಯಿಂದ ರಾಜಾರಾಮಮೋಹನ್ ರಾಯ್, ಜ್ಯೋತಿಬಾಯಿಫುಲೆ, ಸಾವಿತ್ರಿಬಾಯಿಫುಲೆ ಮತ್ತು ಅನೇಕ ಸುಧಾರಣಾವಾದಿಗಳಿಂದ ಅನಿಷ್ಟ ಜಾತಿ ವ್ಯವಸ್ಥೆ, ಬಾಲ್ಯವಿವಾಹ, ಸತಿಸಹಗಮನ ಪದ್ಧತಿ ಹಾಗೂ ವಿಧವಾ ಪದ್ಧತಿಗಳನ್ನು ವಿಮೋಚನೆ ಮಾಡಿದ್ದಾರೆ ಎಂದು ತಿಳಿಸಿದರು.

ಶಿಕ್ಷಣಕ್ಕೆ ಒತ್ತು ನೀಡಿ ಮಡಿವಂತ ಸಮಾಜದಿಂದ ಅವಹೇಳನಕ್ಕೆ ಗುರಿಯಾದರೂ, ಸಹ ಛಲಬಿಡದೇ ಮಹಿಳೆಯರಿಗೆ ಶಿಕ್ಷಣ ಹಾಗೂ ಲಿಂಗಸಮಾನತೆಯನ್ನು ತರಿಸಿದ್ದಾರೆ. ಇಂದಿನ ಆಧುನಿಕ ಮಹಿಳೆಯ ಸಬಲೀಕರಣದ ಮತ್ತು ಶಿಕ್ಷಣದ ಪ್ರತೀಕವೇ ಸಾವಿತ್ರಿಬಾಯಿ ಎಂದು ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಮೆಹಬೂಬ್ ಬಾಷಾ, ವೆಂಕಟೇಶ್, ನರಸಿಂಹಪ್ಪ, ಶ್ರೀರಾಮಪ್ಪ, ಕೃಷ್ಣಪ್ಪ, ನರಸಿಂಹಪ್ಪ, ರಫೀ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ನಾರಾಯಣಸ್ವಾಮಿ ಡಿ.ಕೊತ್ತಪಲ್ಲಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗೌರವಾಧ್ಯಕ್ಷೆ ವೈ.ಎಸ್.ಪ್ರಮೀಳಾ, ಶಿಕ್ಷಕಿಯರಾದ ಧರ್ಮಪುತ್ರಿ, ಸುಕನ್ಯಾ, ಕಲ್ಪನಾ, ಮಂಜುಳಾ, ಹಾಗೂ ಶಹನಾಜ್ ಶಾನ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು