ತ್ಯಾಜ್ಯಕ್ಕೆ ಹೊತ್ತಿಕೊಂಡ ಬೆಂಕಿಯಿಂದ ವ್ಯಾಪಿಸಿರುವ ದಟ್ಟ ಹೊಗೆ
ಬೆಳೆ ಆರೋಗ್ಯ ಹಾಳು
ಹದಿನೈದು ವರ್ಷಗಳ ಹಿಂದೆ ಆಗಿನ ನಗರಸಭೆ ಆಡಳಿತ ಮಂಡಳಿಯವರು ಇಲ್ಲಿ ಶಾಂತಿವನ ಮಾಡುತ್ತೇವೆ ಇರುವ ಗೋಕುಂಟೆ ಸುತ್ತ ಉದ್ಯಾನ ಬೆಳೆಸುತ್ತೇವೆ. ವೃದ್ಧರು ವಾಯು ವಿಹಾರಿಗಳು ಹಾಗೂ ಪಶು ಪಕ್ಷಿಗಳಿಗೆ ಅನುಕೂಲ ಕಲ್ಪಿಸುವ ಭರವಸೆಯೊಂದಿಗೆ ನಾಲ್ಕು ಎಕರೆ ಜಮೀನು ಮಂಜೂರು ಮಾಡಿಸಿಕೊಂಡರು. ಆದರೆ ಇಲ್ಲಿ ನಿರ್ಮಾಣ ಮಾಡಿದ್ದು ಮಾತ್ರ ತ್ಯಾಜ್ಯ ವಿಲೇವಾರಿ ಘಟಕ. ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನೆಲ್ಲ ಇಲ್ಲೇ ವಿಲೇವಾರಿ ಮಾಡಲಾಗುತ್ತಿದೆ. ವರ್ಷಕ್ಕೆ ಮೂರ್ನಾಲ್ಕು ಬಾರಿ ತ್ಯಾಜ್ಯದ ಒತ್ತಡ ಹೆಚ್ಚಿ ಬೆಂಕಿ ಹೊತ್ತಿಕೊಳ್ಳುತ್ತದೆ. ಬೆಂಕಿಯಿಂದ ಹೊರಹೊಮ್ಮುವ ವಿಷಕಾರಿ ಹೊಗೆಯಿಂದ ಸುತ್ತಮುತ್ತಲಿನ ಗ್ರಾಮಗಳ ಬೆಳೆಗಳು ವಿಶೇಷವಾಗಿ ರೇಷ್ಮೆ ಬೆಳೆ ಹಾಳಾಗುತ್ತಿದೆ. ಜನರ ಆರೋಗ್ಯವೂ ಹದಗೆಡುತ್ತಿದೆ. ನೊಣ ಮತ್ತು ನಾಯಿಗಳ ಕಾಟ ಹೆಚ್ಚಾಗಿದೆ. ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ಪ್ರಗತಿಪರ ರೈತ