ಕೊಪ್ಪ: ಪಟ್ಟಣದ ನಿಷೇಧಿತ ನಿಲುಗಡೆ ಜಾಗದಲ್ಲಿ ವಾಹನ ನಿಲ್ಲಿಸಿದ್ದ ಎನ್.ಆರ್.ಪುರ ಪೊಲೀಸ್ ಕಚೇರಿಗೆ ಸೇರಿದ ವಾಹನಕ್ಕೆ ಇಲ್ಲಿನ ಪೊಲೀಸರು ಗುರುವಾರ ದಂಡ ವಿಧಿಸಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದ ಆವರಣದ ಸಮೀಪ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿ, ಉಳಿದ ವಾಹನ ನಿಷೇಧಿತ ಜಾಗಕ್ಕೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಎನ್.ಆರ್.ಪುರ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಜೀಪ್ ಅನ್ನು ಈ ಸ್ಥಳದಲ್ಲಿ ನಿಲ್ಲಿಸಿದ್ದರು. ಕೊಪ್ಪ ಠಾಣೆಯ ಪೊಲೀಸ್ ಸಿಬ್ಬಂದಿ ಮೊದಲು ಜೀಪ್ ಚಕ್ರಕ್ಕೆ ಲಾಕ್ ಅಳವಡಿಸಿದರು. ಬಳಿಕ ಪಿಎಸ್ಐ ಬಸವರಾಜ್ ಅವರು ಎನ್.ಆರ್.ಪುರ ಪೊಲೀಸ್ ಜೀಪ್ ಚಾಲಕ ಉಬೆದುಲ್ಲಾ ಅವರಿಗೆ ₹500 ದಂಡ ವಿಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಂದು ವಾರದ ಹಿಂದೆ ಇದೇ ಬಸ್ ನಿಲ್ದಾಣ ಸಮೀಪ ವಾಹನ ನಿಷೇಧಿತ ಸ್ಥಳದಲ್ಲಿ ನಿಲ್ಲಿಸಿದ್ದ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಗೆ ಸೇರಿದ ಜೀಪ್ಗೆ ದಂಡ ವಿಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.