ಚಿಕ್ಕಮಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ರಜೆಯಲ್ಲಿ ಚಿಕ್ಕಮಗಳೂರಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಮುಳ್ಳಯ್ಯನಗಿರಿ ರಸ್ತೆಯಲ್ಲಿ ಮೂರ್ನಾಲ್ಕು ಕಿಲೋ ಮೀಟರ್ ತನಕ ವಾಹನಗಳು ಸಾಲುಗಟ್ಟಿ ನಿಂತಿವೆ.

ಕೈಮರದಿಂದ ಮುಂದಿರುವ ಎನ್.ಎಂ.ಡಿ.ಸಿ ಚೆಕ್ ಪೋಸ್ಟ್ ನಿಂದ ಅಲ್ಲಂಪುರ ತನಕ ಕಾರು, ಜೀಪು, ಮಿನಿ ಬಸ್ಗಳು ಸಾಲುಗಟ್ಟಿವೆ.

ಮುಳ್ಳಯ್ಯನಗಿರಿಗೆ ಒಂದು ಅವಧಿಗೆ 600 ವಾಹನಗಳನ್ನು ಸೀಮಿತಗೊಳಿಸಲಾಗಿದೆ. ಗಿರಿ ಏರಿರುವ ವಾಹನಗಳು ಇಳಿದಂತೆ ಬೇರೆ ವಾಹನಗಳಿಗೆ ಅವಕಾಶ ಮಾಡಲಾಗುತ್ತಿದೆ. ಇದರಿಂದಾಗಿ ಎನ್.ಎಂ.ಡಿ.ಸಿ ಚೆಕ್ ಪೋಸ್ಟ್ ಬಳಿಯಿಂದ ವಾಹನಗಳು ಸಾಲುಗಟ್ಟಿ ನಿಂತಿವೆ.

ಚಿಕ್ಕಮಗಳೂರಿಂದ- ಮಲ್ಲೇನಹಳ್ಳಿ- ಸಂತವೇರಿ- ಲಿಂಗದಹಳ್ಳಿ- ತರೀಕೆರೆ ಕಡೆಗೆ ಹೋಗುವ ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿವೆ. ಪ್ರವಾಸಿಗರು ದಟ್ಟಣೆಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.