ಚಿಕ್ಕಮಗಳೂರು: ಕಾಶ್ಮೀರ ಪ್ರವಾಸ ಕೈಗೊಂಡಿದ್ದ ನಗರದ ಒಂದೇ ಕುಟುಂಬದ ಐವರು ಸುರಕ್ಷಿತವಾಗಿದ್ದು, ಅವರ ಜತೆ ಜಿಲ್ಲಾಡಳಿತ ಸಂಪರ್ಕ ಸಾಧಿಸಿದೆ.

ರಾಮೇಶ್ವರ ಬಡಾವಣೆಯ ಚಂದ್ರಶೇಖರ್ ತಮ್ಮ ಕುಟುಂಬದವರೊಂದಿಗೆ ಮಂಗಳವಾರ ಕಾಶ್ಮೀರಕ್ಕೆ ತೆರಳಿ ಪಹಲ್ಗಾಮ್ನಲ್ಲಿ ಉಳಿದುಕೊಂಡಿದ್ದರು. ಚಂದ್ರಶೇಖರ್ ಕುಟುಂಬ ಐದು ದಿನ ಪ್ರವಾಸ ಕೈಗೊಂಡಿದ್ದು, ತಾಯಿ ಇಂದಿರಮ್ಮ, ಪತ್ನಿ ಲೀಲಾ, ಮಕ್ಕಳಾದ ನಕ್ಷತ್ರ, ಸ್ನೇಹ ಜೊತೆಗಿದ್ದಾರೆ.

ಘಟನೆ ನಡೆದ ಸ್ಥಳದಿಂದ 500 ಮೀಟರ್ ಅಂತರದಲ್ಲಿ ಇರುವಾಗ ಸಾಕಷ್ಟು ಜನ ಗಾಬರಿಯಿಂದ ಹಿಂದಿರುಗುತ್ತಿದ್ದರು. ಭಯೋತ್ಪಾದಕ ದಾಳಿ ಬಗ್ಗೆ ಮಾಹಿತಿ ತಿಳಿದು ವಾಸ್ತವ್ಯ ಹೂಡಿದ್ದ ಸ್ಥಳಕ್ಕೆ ಹಿಂದಿರುಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ರಾಜ್ಯದ ಪ್ರತಿನಿಧಿಯಾಗಿ ತೆರಳಿರುವ ಸಚಿವ ಸಂತೋಷ್ ಲಾಡ್ ಅವರು ಕೂಡ ಇವರನ್ನು ಸಂಪರ್ಕಿಸಿದ್ದು, ಧೈರ್ಯ ತುಂಬಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.