ಗುರುವಾರ , ಅಕ್ಟೋಬರ್ 17, 2019
21 °C

ಗಿರಿಶ್ರೇಣಿ: 2 ದಿನ ಪ್ರವಾಸಿ ವಾಹನ ಸಂಚಾರಕ್ಕೆ ನಿರ್ಬಂಧ

Published:
Updated:

ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ದತ್ತಮಾಲಾ ಅಭಿಯಾನ ಆಯೋಜಿಸಿದ್ದು, ಇದೇ 12 ಮತ್ತು 13ರಂದು ಗಿರಿಶ್ರೇಣಿಯ ತಾಣಗಳಿಗೆ ಪ್ರವಾಸಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಬಾಬಾಬುಡನ್‌ ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಇದೇ 13ರಂದು ದತ್ತಮಾಲಾ ಅಭಿಯಾನ ಜರುಗಲಿದೆ. ವಿವಿಧೆಡೆಗಳ ಭಕ್ತರು ಕೈಂಕರ್ಯದಲ್ಲಿ ಪಾಲ್ಗೊಳ್ಳುವರು.

ಗಿರಿಶ್ರೇಣಿಯ ತಾಣಗಳಿಗೆ ಎರಡು ದಿನ ಪ್ರವಾಸಿ ವಾಹನಗಳು, ಲಾಂಗ್‌ ಚಾಸಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.

Post Comments (+)