ಕಳಸ: ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯುತ್ತಿರುವ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಎ. ವಿದ್ಯಾರ್ಥಿನಿ ಅನುಪಮಾ ಕೆ. ಚಿನ್ನದ ಪದಕ ಗೆದ್ದಿದ್ದಾರೆ.

ಕಳಸ ತಾಲ್ಲೂಕಿನ ಕವನಹಳ್ಳದ ಬದನೇಖಾನ್ ಎಸ್ಟೇಟ್‌ನ ಕೂಲಿ ಕಾರ್ಮಿಕರಾದ ಕುಮಾರ ಮತ್ತು ಶಾರದಾ ದಂಪತಿಯ ಪುತ್ರಿ. ಪ್ರೌಢ ಶಾಲೆ ಮತ್ತು ಪಿಯುಸಿಯಲ್ಲಿ ಕಲಿಯುತ್ತಿದ್ದಾಗಲೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಳು.ಕಳೆದ ಸಾಲಿನಲ್ಲಿ ವಿ.ವಿಯಲ್ಲಿ ತೃತೀಯ ಸ್ಥಾನ ಪಡೆದಿದ್ದರು.

ಅನುಪಮಾ ಕಾಲೇಜಿಗೆ ಬರಲು ಪ್ರತಿನಿತ್ಯ ಕವನಹಳ್ಳ ದಿಂದ ಹೊರನಾಡಿನವರೆಗೆ ಸುಮಾರು 16 ಕಿ.ಮೀ ನಡೆಯುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ತಿಳಿಸಿದರು.

ಕ್ರೀಡೆಯಲ್ಲಿ ಸಾಧನೆ ಜೊತೆ ಉಪನ್ಯಾಸಕಿ ಆಗುವ ಕನಸು ಹೊತ್ತಿರುವ ಆಕೆಗೆ ತರಬೇತಿ ಹಾಗೂ ನೆರವು ಸಿಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.