ಈ ಯೋಜನೆ ಅನುಷ್ಠಾನಗೊಂಡರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇಂಟರ್‌ನೆಟ್ ಸಂಪರ್ಕ ಸಮೃದ್ಧವಾಗಲಿದೆ. ಗ್ರಾಮೀಣ ಜನರಿಗೆ ಸೇವೆ ವೇಗವಾಗಿ ದೊರಕಲಿವೆ
ಮಹದೇವ್ ಬಿಎಸ್‌ಎನ್‌ಎಲ್ ಉಪಪ್ರಧಾನ ವ್ಯವಸ್ಥಾಪಕ ಮಹಾದೇವ್
ನಿರಂತರ ಸಂಪರ್ಕ ಹೇಗೆ
ತಾಲ್ಲೂಕು ಕೇಂದ್ರದಿಂದ ಹೋಬಳಿ ಮೂಲಕ ಹಳ್ಳಿಗಳಿಗೆ ಒಂದೇ ಲೈನ್‌ನಲ್ಲಿ ಕೇಬಲ್ ಸಂಪರ್ಕ ಕಲ್ಪಿಸಲಾಗುತ್ತಿತ್ತು. ಈಗ ಅಮೆಂಡೆಡ್ ಭಾರತ್‌ನೆಟ್ ಪ್ರೋಗ್ರಾಮ್(ಎಬಿಪಿ) ಅಡಿಯಲ್ಲಿ ಎಲ್ಲಾ ಹಳ್ಳಿಗಳಿಗೆ ಒಎಫ್‌ಸಿ ಕೇಬಲ್ ಆಧರಿತ ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಒಂದು ಹಳ್ಳಿಯ ಲೈನ್ ತುಂಡಾದರೆ ಮತ್ತೊಂದು ಹಳ್ಳಿಯಿಂದ ಸಂಪರ್ಕ ಲಭ್ಯವಾಗುವ ವ್ಯವಸ್ಥೆಯನ್ನು ಈ ಹೊಸ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಒಂದು ಹಳ್ಳಿಗೆ ಕನಿಷ್ಠ ಎರಡು ಅಥವಾ ಮೂರು ಕಡೆಯಿಂದ ಕೇಬಲ್ ಸಂಪರ್ಕ ಇರಲಿದೆ. ರಾಜ್ಯದಲ್ಲಿ ಸದ್ಯ 31 ಸಾವಿರ ಕಿಲೋ ಮೀಟರ್ ಕೇಬಲ್ ಸಂಪರ್ಕವಿದ್ದು ಅದನ್ನು 50 ಸಾವಿರಕ್ಕೆ ಏರಿಸಲಾಗುತ್ತಿದೆ ಎಂದು ಬಿಎಸ್‌ಎನ್‌ಎಲ್ ಉಪಪ್ರಧಾನ ವ್ಯವಸ್ಥಾಪಕ ಮಹಾದೇವ್ ತಿಳಿಸಿದರು. ಗೋವಾ ಕರ್ನಾಟಕ ಪುದುಚೇರಿ ಸೇರಿ ₹6500 ಕೋಟಿ ಅಂದಾಜು ಮೊತ್ತದ ಯೋಜನೆ ರೂಪಿಸಲಾಗಿತ್ತು. ₹3400 ಕೋಟಿಗೆ ಟೆಂಡರ್ ನಿಗದಿಯಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು ಮೊದಲ ಹಂತದಲ್ಲಿ ಇಂಟರ್‌ನೆಟ್ ಸಂಪರ್ಕವೇ ಇಲ್ಲದ ಗ್ರಾಮ ಪಂಚಾಯಿತಿಗಳಿಗೆ ಈ ಸಂಪರ್ಕ ದೊರಕಲಿದೆ. ಬಳಿಕ ಎಲ್ಲಾ ಪಂಚಾಯಿತಿಗಳಿಗೂ ವಿಸ್ತರಣೆಯಾಗಲಿದೆ ಎಂದು ಮಾಹಿತಿ ನೀಡಿದರು.