ಮೂಡಿಗೆರೆ: ನಿವೇಶನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರು ಶುಕ್ರವಾರ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದರು.

ಮುಷ್ಕರದಲ್ಲಿ ಭಾಗವಹಿಸಿದ್ದ ಹೆಸ್ಗಲ್ ಗ್ರಾ.ಪಂ. ಮಾಜಿ ಸದಸ್ಯ ಗಿರೀಶ್ ಹೆಸ್ಗಲ್ ಮಾತನಾಡಿ, ‘ಹೆಸ್ಗಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ 2018ರಲ್ಲಿ 600ಕ್ಕೂ ಅಧಿಕ ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 30 ವರ್ಷಗಳಿಂದ ಇಲ್ಲಿಯವರೆಗೂ ಒಂದೇ ಒಂದು ನಿವೇಶನ ನೀಡಿಲ್ಲ. ಇತ್ತೀಚೆಗೆ ಹೆಸ್ಗಲ್ ಗ್ರಾಮದ ಕೊಲ್ಲಿಬೈಲ್ ಬಳಿ ಸುಮಾರು 40 ಎಕರೆಗೂ ಅಧಿಕ ಸರ್ಕಾರಿ ಹಾಗೂ ಗೋಮಾಳ ಭೂಮಿ ಇದೆ ಎಂದು ತಿಳಿದು ಬಂದಿದೆ. ಈ ಜಾಗವನ್ನು ನಿವೇಶನ ರಹಿತರಿಗೆ ಮೀಸಲಿರಿಸಬೇಕು’ ಎಂದು ಒತ್ತಾಯಿಸಿದರು.

ಹೆಸ್ಗಲ್ ಗ್ರಾ.ಪಂ. ಸದಸ್ಯ ಶಿವಣ್ಣ ಮಾತನಾಡಿ, ‘40 ಎಕರೆ ಸರ್ಕಾರಿ ಜಾಗದಲ್ಲಿ ಈಗಾಗಲೇ ಪ.ಪಂ.ಗೆ 5 ಎಕರೆ ಭೂಮಿ ಮೀಸಲಿರಿಸಿರುವ ಬಗ್ಗೆ ಮಾಹಿತಿ ಬಂದಿದೆ. ಸಾರ್ವಜನಿಕರ ಅಭಿವೃದ್ಧಿಗೆ ಭೂಮಿ ಮೀಸಲಿರಿಸಿರುವುದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಮೊದಲು ನಿವೇಶನಕ್ಕಾಗಿ ಭೂಮಿ ಮೀಸಲಿರಿಸಬೇಕು. 94ಸಿ ಅರ್ಜಿ ಕೂಡಲೇ ವಿಲೆ ಮಾಡಬೇಕು. ಹೆಸ್ಗಲ್ ಕಾಲೊನಿಯಲ್ಲಿ ಸರ್ವೆ ನಂ. 3/1ರಲ್ಲಿ 4.30 ಎಕರೆ ಜಮೀನಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಾಸವಾಗಿರುವ 60ಕ್ಕೂ ಅಧಿಕ ಕುಟುಂಬಕ್ಕೆ ಹಕ್ಕುಪತ್ರ ನೀಡಬೇಕು. ಜಿಲ್ಲಾಧಿಕಾರಿ ಹಾಗೂ ಕಂದಾಯ ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಬಂದು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಭರವಸೆ ನೀಡುವವರೆಗೂ ಮುಷ್ಕರ ಮುಂದುವರೆಸಲಾಗುವುದು’ ಎಂದು ಹೇಳಿದರು.

ಹೆಸ್ಗಲ್ ಗ್ರಾ.ಪಂ. ಸದಸ್ಯರಾದ ಪ್ರಶಾಂತ್ ಬಿಳಗುಳ, ಅಶೋಕ್, ಪೂರ್ಣೇಶ್, ಮಾಜಿ ಸದಸ್ಯರಾದ ಕಾಮಾಕ್ಷಿ, ಮೊಹಮ್ಮದ್, ಕಲ್ಲೇಶ್ ಸೇರಿದಂತೆ ಹೆಸ್ಗಲ್ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.