ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು | ಮಾಜಿ‌ ಯೋಧ ಮಹೇಶ್‌ಗೆ ಅದ್ದೂರಿ ಸ್ವಾಗತ

Published 1 ಜೂನ್ 2024, 13:58 IST
Last Updated 1 ಜೂನ್ 2024, 13:58 IST
ಅಕ್ಷರ ಗಾತ್ರ

ಕಡೂರು: ಸಿಆರ್‌ಪಿಎಫ್‌ನಲ್ಲಿ 40ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಾಲ್ಲೂಕಿನ ಮತಿಘಟ್ಟದ ಎಂ.ಎನ್.ಮಹೇಶ್ ಅವರನ್ನು ಚಿಂತಕ‌ ಉಮೇಶ್ ಮತ್ತಿತರರು ಕಡೂರು ರೈಲ್ವೆ ನಿಲ್ದಾಣದಲ್ಲಿ‌ ಸ್ವಾಗತಿಸಿದರು.‌

ಸಿಆರ್‌ಪಿಎಫ್‌ನಲ್ಲಿ 40ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಾಲ್ಲೂಕಿನ ಮತಿಘಟ್ಟದ ಎಂ.ಎನ್.ಮಹೇಶ್ ಅವರನ್ನು ಚಿಂತಕ ಉಮೇಶ್ ಮತ್ತಿತರರು ಆತ್ಮೀಯವಾಗಿ ಸನ್ಮಾನಿಸಿದರು.

ಚಿಂತಕ ಉಮೇಶ್ ಮಾತನಾಡಿ, ‘ದೇಶ ಕಾಯುವ ಸೈನಿಕರು, ಅನ್ನ ನೀಡುವ ರೈತರಿಗೆ ಪ್ರಥಮ ಗೌರವ ಸಲ್ಲಬೇಕು. ಆ ನಿಟ್ಟಿನಲ್ಲಿ ಚೆನೈನಲ್ಲಿ ಸಿಆರ್‌ಪಿಎಫ್‌ನಲ್ಲಿ 77ನೇ ಬೆಟಾಲಿಯನ್‌ನ ಇನ್‌ಸ್ಪೆಕ್ಟರ್ ಆಗಿ 40 ವರ್ಷ ಸೇವೆ ಸಲ್ಲಿಸಿ ತಾಲ್ಲೂಕಿಗೆ ಕೀರ್ತಿ ತಂದಿರುವ ಮಹೇಶ್ ಅವರು ಅಭಿನಂದನೀಯರು’ ಎಂದರು.

ಮಹೇಶ್ ಅವರನ್ನು ಪತ್ನಿ‌ ಮೋಹನ್ ಕುಮಾರಿ ಆರತಿ ಬೆಳಗಿ ಸ್ವಾಗತಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್, ಚೀರನಹಳ್ಳಿ ಬಸವರಾಜು, ಅರೆಸೇನಾಪಡೆ ನಿವೃತ್ತ ಯೋಧರ ಸಂಘದ ಪದಾಧಿಕಾರಿಗಳು, ಬಳ್ಳೆಕೆರೆ ಬಸವರಾಜು, ಮತಿಘಟ್ಟ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT