ಶೃಂಗೇರಿ: ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪ್ರದೀಪ್ ಕುಮಾರ್ ಪಿ ಹಾಗೂ ಸಿಇಒ ರಾಘವೇಂದ್ರ ಎಸ್ ಭಟ್ ಅವರು ಸೋಮವಾರ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ, ಪೀಠದ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ದರ್ಶನ ಪಡೆದರು.

‘ದೇಶದಾದ್ಯಂತ ಬ್ಯಾಂಕಿನ ಒಟ್ಟು 965 ಶಾಖೆ, 1600ಕ್ಕೂ ಎಟಿಎಂಗಳು ಕಾರ್ಯಾಚರಿಸುತ್ತಿದ್ದು, ವಾರ್ಷಿಕ ವ್ಯವಹಾರವು ₹ 1.77 ಲಕ್ಷ ಕೋಟಿ ವ್ಯವಹಾರ ನಡೆಸಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಲಾಭ ಗಳಿಸುತ್ತಿದ್ದು, 9000ಕ್ಕೂ ಹೆಚ್ಚು ಸಿಬ್ಬಂದಿ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. 102ನೇ ವರ್ಷಕ್ಕೆ ಕಾಲಿಡುತ್ತಿರುವ ಬ್ಯಾಂಕ್ ಸಾಕಷ್ಟು ವ್ಯವಹಾರ ಹಾಗೂ ಹೆಚ್ಚಿನ ಲಾಭದ ಗುರಿಯನ್ನು ಹೊಂದಿದೆ. ಬ್ಯಾಂಕ್ನ ಭವಿಷ್ಯದ ಅಭಿವೃದ್ಧಿಗೆ ಗುರುಪೀಠದ ಆಶೀರ್ವಾದ ನಿರಂತರವಾಗಿರಬೇಕು’ ಎಂದು ರಾಘವೇಂದ್ರ ಎಸ್.ಭಟ್ ಹೇಳಿದರು.

‘ಸ್ಥಳೀಯ ಶಾರದಾ ಬ್ಯಾಂಕ್ ಅನ್ನು ವಿಲೀನಗೊಳಿಸಿ ಈ ಪ್ರಮಾಣದಲ್ಲಿ ಬೆಳೆದಿರುವ ಕರ್ಣಾಟಕ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ. ಬ್ಯಾಂಕಿನಿಂದ ಜನಸಾಮಾನ್ಯರಿಗೆ ಉತ್ತಮ ಸೇವೆ ಸಿಗಲಿ ಎಂದು ವಿಧುಶೇಖರಭಾರತೀ ಸ್ವಾಮೀಜಿ ಹಾರೈಸಿದರು.

ಇದೇ ವೇಳೆ ಶೃಂಗೇರಿ ಮಠದ ಜಯಭಾರತೀ ಪ್ರೌಢಶಾಲೆಗೆ ಶಾಲಾ ಬಸ್ ಅನ್ನು ಖರೀದಿಸಲು ₹24.40 ಲಕ್ಷದ ಚೆಕ್ನ್ನು ದೇಣಿಗೆಯಾಗಿ ನೀಡಲಾಯಿತು.

ಈ ವೇಳೆ ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಮುರುಳಿ, ಬ್ಯಾಂಕ್ನ ನೀರ್ದೆಶಕರಾದ ಬಾಲಕೃಷ್ಣ ಅಲಸೆ, ಜೀವನ್ದಾಸ್ ನಾರಾಯಣ್, ಶಿವಮೊಗ್ಗದ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ್ ಎಚ್.ಎ, ಸ್ಥಳೀಯ ಶಾಖಾ ವ್ಯವಸ್ಥಾಪಕರಾದ ಕಿರಣ್ ಕುಮಾರ್, ನವೀನ್ಕುಮಾರ್ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.