ಚಿಕ್ಕಮಗಳೂರು: ಭೂಸ್ವಾಧೀನಪಡಿಸಿಕೊಂಡು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಸರ್ಕಾರಿ ಜಾಗ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದು ಎಂದು ಜಮೀನು ಮಾಲೀಕ ಕೆಂಚಪ್ಪ ತಿಳಿಸಿದರು.

ಬಸವನಹಳ್ಳಿ ಗ್ರಾಮದ ಸರ್ವೆ ನಂ. 6ರಲ್ಲಿರುವ 1 ಎಕರೆ 35 ಗುಂಟೆ ಜಮೀನು ನಮ್ಮ ಅಜ್ಜ ಚಿಕ್ಕಣ್ಣ ಎಂಬುವರಿಗೆ ಪಿತ್ರಾರ್ಜಿತವಾಗಿ ಬಂದ ಸ್ವತ್ತಾಗಿದೆ. ಅವರ ನಿಧನದ ನಂತರ ಅವರ ಮಗನಾದ ಸುಗನಯ್ಯ ಅವರಿಗೆ ಪೌತಿ ಖಾತೆಯಂತೆ ಬಂದಿದೆ. ಅವರ ನಿಧನದ ಬಳಿಕ ನನಗೆ ಆಸ್ತಿ ಬಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘2018ರಲ್ಲಿ ಆಸ್ತಿ ಭಾಗ ಮಾಡಿಕೊಳ್ಳಲಾಗಿದೆ. ಕುಟುಂಬದವರು ಮನೆ ಕಟ್ಟಿಕೊಳ್ಳುವ ಉದ್ದೇಶದಿಂದ ಈ ಆಸ್ತಿಯನ್ನು ವ್ಯವಸಾಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆ ಕೋರಿದ್ದೆವು. ಭೂಪರಿವರ್ತನೆ ಆದೇಶ ಪಡೆದ ಕಾನೂನು ಪ್ರಕಾರವೇ ಎಲ್ಲರು ಸೇರಿ ಮಾರಾಟ ಮಾಡಿದ್ದೇವೆ’ ಎಂದರು.

‘ಕಡಿಮೆ ಬೆಲೆಗೆ ಈ ಭೂಮಿ ಪಡೆದುಕೊಳ್ಳಲು ಕೆಲವರು ಪ್ರಯತ್ನಿಸಿದ್ದರು. ಅವರಿಗೆ ಜಮೀನು ನೀಡಲಿಲ್ಲ ಎಂಬ ಕಾರಣಕ್ಕೆ ತೊಂದರೆ ನೀಡುತ್ತಿದ್ದಾರೆ. ಅಕ್ಕ– ಪಕ್ಕದಲ್ಲಿ ಪಾಲಿಟೆಕ್ನಿಕ್ಗೆ ಸೇರಿದೆ ಜಾಗಗಳಿದ್ದು, ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಜಮೀನಿನ ಮಾಲೀಕರಾದ ಶಿವಣ್ಣ, ಭಾಗ್ಯ, ಈಶ್ವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.