ಗಿರಿ ಶ್ರೇಣಿ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ವಾರಾಂತ್ಯದಲ್ಲಿ ಗಿರಿಯಲ್ಲಿ ವಾಹನಗಳ ದಟ್ಟಣೆ ಸಂಭವಿಸಿ ಸ್ಥಳೀಯರಿಗೂ ತೊಂದರೆಯಾಗುತ್ತಿದೆ. ಸಾವಿರಾರು ವಾಹನಗಳು ಸಾಲುಗಟ್ಟಿ ಸಂಚರಿಸಿ ಇಲ್ಲಿನ ಜೀವ ವೈವಿಧ್ಯತೆಗೂ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಖಾಸಗಿ ವಾಹನಗಳ ಸಂಚಾರವನ್ನು ಗಿರಿಭಾಗಕ್ಕೆ ನಿಷೇಧಿಸಬೇಕು ಎಂದು ಪರಿಸರಾಸಕ್ತ ವೀರೇಶ್ ಜಿ ಒತ್ತಾಯಸಿದ್ದಾರೆ. ವಾಹನಗಳು ಹೊರಸೂಸುವ ಕಲುಷಿತ ಹೊಗೆಯಿಂದ ಸೂಕ್ಷ್ಮ ಪರಿಸರ ಮತ್ತು ವನ್ಯಜೀವಿಗಳ ಜೀವಕ್ಕೆ ತೊಂದರೆಯಾಗುತ್ತಿದೆ. ಹಲವು ನದಿಗಳ ಉಗಮ ಸ್ಥಾನವೂ ಆಗಿದೆ. ಇಲ್ಲಿ ಮಾತ್ರ ಕಂಡು ಬರುವ ಅಪರೂಪದ ಪ್ರಾಣಿ ಪಕ್ಷಿಗಳ ಆವಾಸಸ್ಥಾನ ಇದಾಗಿದೆ. ಆದ್ದರಿಂದ ನಗರದಲ್ಲಿ ಪ್ರವಾಸಿ ವಾಹನ ನಿಲ್ಲಿಸಲು ಜಾಗ ಕಲ್ಪಿಸಬೇಕು ಎಂದು ಹೇಳಿದ್ದಾರೆ. ಸರ್ಕಾರಿ ಮಿನಿ ಬಸ್ ಸಫಾರಿ ವಾಹನ ಬಿಡುವ ಮೂಲಕ ಪ್ರವಾಸಿ ವಾಹನಗಳ ದಟ್ಟಣೆ ಕಡಿಮೆ ಮಾಡಬೇಕು. ಪ್ರವಾಸಿಗರಿಗೂ ಉತ್ತಮ ವ್ಯವಸ್ಥೆ ಕಲ್ಪಿಸಲು ಅವಕಾಶ ಇದೆ. ಇದರಿಂದ ದಟ್ಟಣೆ ಕಿರಿ ಕಿರಿ ತಪ್ಪುತ್ತದೆ ಮತ್ತು ಪರಿಸರ ಕೂಡ ಉಳಿಯುತ್ತದೆ. ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.