ಮೂಡಿಗೆರೆ: ‘ಹೆಸ್ಗಲ್, ಹಳೆಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳನ್ನು ಸೇರ್ಪಡೆಗೊಳಿಸಿ, ಮೂಡಿಗೆರೆ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಮಾಡಲು ತಯಾರಿ ನಡೆದಿದೆ’ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

ತಾಲ್ಲೂಕಿನ ಹೆಸ್ಗಲ್ ಗ್ರಾ.ಪಂ ಕಚೇರಿ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾ.ಪಂ ಚುನಾಯಿತ ಪ್ರತಿನಿಧಿಗಳ ಅವಧಿ ನವೆಂಬರ್ನಲ್ಲಿ ಕೊನೆಗೊಳ್ಳಲಿದ್ದು, ಡಿಸೆಂಬರ್ನಲ್ಲಿ ಚುನಾವಣೆ ನಡೆಯಬೇಕಾಗಿದೆ. ಅಷ್ಟರಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 20 ವರ್ಷದಿಂದ ತಾಲ್ಲೂಕಿನಲ್ಲಿ ನಿವೇಶನ ಹಂಚಿಕೆ ಮಾಡದೆ ಸಮಸ್ಯೆ ಉಂಟಾಗಿತ್ತು. ಈ ಭಾರಿ ಬಹುತೇಕ ಕಡೆ ನಿವೇಶನ ಹಂಚಿಕೆ ಮಾಡಲಾಗಿದೆ. ಹೆಸಗಲ್ ಗ್ರಾ.ಪಂ ವ್ಯಾಪ್ತಿಯಲ್ಲಿ 19 ಎಕರೆ ಜಾಗ ಗುರುತಿಸಲಾಗಿದ್ದು, ಅದರಲ್ಲಿ ನಿವೇಶನಕ್ಕೆಂದು 5 ಎಕರೆ, ಪಟ್ಟಣ ಪಂಚಾಯಿತಿಗೆ 5 ಎಕರೆ, ಮುಸ್ಲಿಂ ಸ್ಮಶಾನಕ್ಕೆ 1 ಎಕರೆ, ಪರಿಶಿಷ್ಟ ವರ್ಗದ ಯೋಜನೆಗಳಿಗೆ 5 ಎಕರೆ ಮೀಸಲಿರಿಸಲಾಗಿದೆ ಎಂದರು.

ನಂದೀಪುರ ಗ್ರಾ.ಪಂಯಲ್ಲಿ 3.36 ಎಕರೆ ಜಾಗದಲ್ಲಿ ನಿವೇಶನ ಮಾಡಲಾಗಿದೆ. ಶಾಸಕಿಯಾದ ಬಳಿಕ ಕಾರ್ಪೊರೇಟ್ ಸ್ಟೈಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಗ್ರಾ.ಪಂ ಕಟ್ಟಡಗಳು ಕೂಡ ಕಾರ್ಪೊರೇಟ್ ಕಚೇರಿಗೆ ಹೋಲುವ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಮಾಡಿಕೊಡಲು ಬೇಜವಾಬ್ದಾರಿ ತೋರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಸರ್ಕಾರ ಹಾಗೂ ಜನರ ಮಧ್ಯದಲ್ಲಿ ಜನಪ್ರತಿನಿಧಿಗಳು ಸೇತುವೆಯಾಗಿದ್ದಾರೆ. ಜನರ ಸಮಸ್ಯೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕೊಡುವ ಆಶ್ವಾಸನೆ, ಭರವಸೆ ಸಂಪೂರ್ಣವಾಗಿ ಈಡೇರಿಸಲು ಗ್ರಾ.ಪಂ. ಸದಸ್ಯರಿಂದ ಎಂಎಲ್ಸಿ, ಎಂಎಲ್ಎ, ಎಂಪಿವರೆಗೂ ಸಾಧ್ಯವಿಲ್ಲ. ಆದರೆ, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆಯದೆ, ಅಭಿವೃದ್ಧಿ ಜತೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹರಿಗೆ ದೊರಕಿಸಲು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಜಯರಾಮ್, ಪ.ಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಗ್ರಾ.ಪಂ ಅಧ್ಯಕ್ಷೆ ನಜ್ಮಾ ಬೇಗಂ, ಉಪಾಧ್ಯಕ್ಷ ಆದರ್ಶ, ಸದಸ್ಯರಾದ ಬಿ.ಸಿ. ಪ್ರಜಾವತಿ, ಬಿ.ಎನ್. ರಾಧಾ, ಸತ್ಯವತಿ, ಬಿ.ಎಲ್. ನಂದ, ಹಾಲಮ್ಮ, ಶಿವಣ್ಣ, ಆಶಾ, ಅರವಿಂದ, ಶ್ವೇತ, ಖಲೀಮುಲ್ಲಾ, ಅಖಿಲಾ, ಪೂರ್ಣೇಶ್, ಚಂದ್ರಶೇಖರ್, ಸುಧಾ ಮಂಜುನಾಥ್, ಎಚ್.ಎಲ್. ಪ್ರಶಾಂತ್, ತಾಪಂ ಇಓ ದಯಾವತಿ, ಪಿಡಿಒ ಸೌಮ್ಯ, ತಾ.ಪಂ ಮಾಜಿ ಅಧ್ಯಕ್ಷ ಕೆ.ಸಿ. ರತನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.