ಕಡೂರು: ಹಣ್ಣುಗಳ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವುದು ಗ್ರಾಹಕರ ನಿದ್ರೆಗೆಡಿಸಿದೆ. ಸದ್ಯ ಹಬ್ಬಗಳ ಸೀಸನ್ ಅಲ್ಲದಿದ್ದರೂ, ಮಾರುಕಟ್ಟೆಗೆ ಹಣ್ಣುಗಳ ಪೂರೈಕೆ ಕಡಿಮೆ ಇರುವುದರಿಂದ ಬೆಲೆ ಇಳಿಕೆಯಾಗುತ್ತಿಲ್ಲ.

ಹಚ್ಚು ಬೇಡಿಕೆ ಇರುವ ಏಲಕ್ಕಿ ಬಾಳೆಹಣ್ಣಿಗೆ ಸದ್ಯ ಕೆ.ಜಿಗೆ ₹70 ದರ ಇದೆ. ಪಚ್ಚಬಾಳೆಹಣ್ಣು ₹40 ಬೆಲೆ ಇದೆ. ದಾಳಿಂಬೆ ಹಣ್ಣಿಗೆ ₹180 ರಿಂದ ₹200 ಬೆಲೆ ಇದೆ. ಮೂಸಂಬಿ ₹60, ಕಿತ್ತಳೆ ₹50 ರಿಂದ ₹70, ಸೀಬೆಹಣ್ಣು(ಪೇರಳೆ) ₹100, ಡ್ರ್ಯಾಗನ್ ಫ್ರೂಟ್ ಒಂದಕ್ಕೆ ₹60, ಸಪೋಟ ₹80, ಸೀಡ್ ಲೆಸ್ ದ್ರಾಕ್ಷಿ ₹80, ಕಪ್ಪುದ್ರಾಕ್ಷಿ ₹120, ಸೀತಾಪಲ ₹80, ಸೇಬು ₹180 ರಿಂದ ₹200, ಊಟಿ ಆ್ಯಪಲ್ ₹80 ಬೆಲೆ ಇದೆ. ಉಳಿದ ಹಣ್ಣುಗಳಿಗೆ ಹೋಲಿಸಿದರೆ ಪಪ್ಪಾಯ ಹಣ್ಣಿನ ದರ ತುಸು ಕಡಿಮೆ ಇದ್ದು, ಸದ್ಯ ಕೆಜಿಗೆ ₹20 ದರದಲ್ಲಿ ಮಾರಾಟ ಆಗುತ್ತಿದೆ. ತೈವಾನ್ ತಳಿ ಪಪ್ಪಾಯ ಹಣ್ಣಿಗೆ ಹಚ್ಚಿನ ಬೇಡಿಕೆಯಿದ್ದು ₹30 ರಿಂದ 35ರವರೆಗೆ ಬೆಲೆ ಇದೆ.

ಕಲ್ಲಂಗಡಿ ಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಒಂದು ಕೆಜಿಗೆ ₹30 ಬೆಲೆ ಇದೆ. ಐದು ಕೆಜಿ ತೂಗುವ ಒಂದು ಹಣ್ಣು ₹120 ರಿಂದ ₹150ಕ್ಕೆ ಸಿಗುತ್ತಿದೆ. ನಾಲ್ಕು ಕಿವಿ ಹಣ್ಣುಗಳ ಒಂದು ಬಾಕ್ಸ್ ಬೆಲೆ ₹200. ಅನಾನಸ್ 1 ಕೆಜಿಗೆ ₹ 65 ಇದೆ.

ಬಾಳೆಹಣ್ಣು ಮತ್ತು ಪಪ್ಪಾಯ ಹಣ್ಣು ಮಾತ್ರ ಸ್ಥಳೀಯವಾಗಿ ಬೆಳೆಯಲಾಗುತ್ತದೆ. ಉಳಿದ ಹಣ್ಣುಗಳನ್ನು ಬೇರೆ ಕಡೆಯಿಂದ ತರಿಸಲಾಗುತ್ತದೆ. ನಮಗೆ ಸಿಗುವ ದರಕ್ಕಿಂತ ಸ್ವಲ್ಪ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುವುದು ಅನಿವಾರ್ಯ. ಬೆಲೆ ಏರಿಕೆಯಿಂದ ಗ್ರಾಹಕರು ಹಣ್ಣುಗಳನ್ನು ಕೆಜಿಗಟ್ಟಲೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹಣ್ಣಿನ ವ್ಯಾಪಾರಿ ಲಿಖಾಯತ್ ಖಾನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.