ಸಿಹಿ ತಿನಿಸು ಬಟ್ಟೆ ವ್ಯಾಪಾರವೂ ಜೋರು
ದೀಪಾವಳಿ ಹಬ್ಬಕ್ಕೆ ಸಿಹಿ ತಿನಿಸು ಖರೀದಿಯೂ ಜೋರಾಗಿದೆ. ಬೇಕರಿಗಳ ಮುಂದೆ ಜನ ಮುಗಿಬಿದ್ದು ತಿನಿಸು ಖರೀದಿ ಮಾಡುತ್ತಿದ್ದಾರೆ. ಹೊಸ ಬಟ್ಟೆಗಳ ಖರೀದಿ ಕೂಡ ಜೋರಾಗಿ ನಡೆಯುತ್ತಿದ್ದು ನಗರದ ಎಂ.ಜಿ.ರಸ್ತೆಯಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ವಹಿವಾಟು ಚುರುಕು ಪಡೆದಿದೆ. ದೀಪಾವಳಿ ಕೊಡುಗೆ ಎಂಬ ಫಲಕಗಳನ್ನು ಹಾಕಿ ಅಂಗಡಿಗಳಲ್ಲಿ ಜನರನ್ನು ಆಕರ್ಷಿಸಲಾಗುತ್ತಿದೆ.