ಶನಿವಾರ, ಡಿಸೆಂಬರ್ 3, 2022
21 °C

ಬಿ.ಕೋಡಿಹಳ್ಳಿ- ಸಡಗರದ ತುಳಸಿ ಕಲ್ಯಾಣೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀರೂರು: ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ತುಳಸಿ ಕಲ್ಯಾಣ ಮತ್ತು ವೃಂದಾವನೋತ್ಸವ ನೆರವೇರಿತು.

ಉತ್ಥಾನದ್ವಾದಶಿ ಅಂಗವಾಗಿ ಶನಿವಾರ ಗ್ರಾಮದೇವತೆ ರಂಗನಾಥಸ್ವಾಮಿಗೆ ಅಭಿಷೇಕ, ಪುಷ್ಪಾಲಂಕಾರ ನೆರವೇರಿಸಿ, ಕಲ್ಯಾಣೋತ್ಸವ ನಡೆಸಲು ಉತ್ಸವ ಮೂರ್ತಿಗಳನ್ನು ರಾತ್ರಿ ವೃಂದಾವನಕ್ಕೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಅಲ್ಲಿ ತುಳಸಿ-ರಂಗನಾಥಸ್ವಾಮಿ ಕಲ್ಯಾಣ ಸೇವೆ, ಮಹಾಮಂಗಳಾರತಿ, ಭಾನುವಾರ ಬೆಳಿಗ್ಗೆ ಹಣ್ಣು, ತುಪ್ಪ ಸೇವೆ, ಗಂಗಾಪೂಜೆ ಸಲ್ಲಿಸಿ ಗುಡಿ ತುಂಬಿಸಲಾಯಿತು. ಸಂಜೆ ಸ್ವಾಮಿಯ ಊರ ಮೆರವಣಿಗೆ, ಪ್ರಸಾದ ವಿನಿಯೋಗ ನಡೆಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು