ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371 ಜೆ ಸೌಲಭ್ಯ ವಿಸ್ತರಣೆಗೆ ಆಗ್ರಹ

ಮೊಳಕಾಲ್ಮುರನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಉಳಿಸಲು ಹೋರಾಟ
Last Updated 21 ನವೆಂಬರ್ 2020, 14:00 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಮೊಳಕಾಲ್ಮುರು ತಾಲ್ಲೂಕನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಾಲ್ಲೂಕಿಗೆ 371 ಜೆ ಕಲಂ ಸೌಲಭ್ಯ ಕಲ್ಪಿಸಬೇಕುಎಂದು ಆಗ್ರಹಿಸಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳಲು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಇಲ್ಲಿನ ಕನ್ನಡ ಭವನದಲ್ಲಿ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ರೈತರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

‘ತಾಲ್ಲೂಕು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಸ್ವಾತಂತ್ರ್ಯ ನಂತರ ಬಂದಿರುವ ಎಲ್ಲಾ ಸರ್ಕಾರಗಳು ತಾಲ್ಲೂಕನ್ನು ಕಡೆಗಣಿಸಿವೆ. ಮಳೆ ಸಹ ಸದಾ ಕೈಕೊಡುತ್ತಿದ್ದು, ರೈತರು ದಿಕ್ಕು ತೋಚದಂತಾಗಿದ್ದಾರೆ. ಈ ಸ್ಥಿತಿಯಲ್ಲಿ ಇಲ್ಲಿ ಜನರು ಬದುಕು ಕಟ್ಟಿಕೊಳ್ಳಲು ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕಾಗಿ ನೆರೆಯ ಬಳ್ಳಾರಿ ಜಿಲ್ಲೆಗೆ ನೀಡಿರುವ 371 ಜೆ ಕಲಂ ಮಾದರಿ ಸೌಲಭ್ಯಗಳನ್ನು ತಾಲ್ಲೂಕಿಗೂ ವಿಸ್ತರಣೆ ಮಾಡಬೇಕು’ ಎಂದುರೈತಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಸಿಪಿಐನ ಜಾಫರ್ ಷರೀಫ್, ಜನಸಂಸ್ಥಾನ ವಿರೂಪಾಕ್ಷಪ್ಪ ಆಗ್ರಹಿಸಿದರು.

‘ಮೊಳಕಾಲ್ಮುರನ್ನು ಬಳ್ಳಾರಿಗೆ ಸೇರ್ಪಡೆ ಮಾಡಿ ಸೌಲಭ್ಯ ಕೇಳಲಾಗುತ್ತಿದೆ ಎಂಬ ವದಂತಿ ಹಬ್ಬಿದೆ. ಇದು ಸತ್ಯಕ್ಕೆ ದೂರವಾಗಿದೆ. ತಾಲ್ಲೂಕನ್ನು ಚಿತ್ರದುರ್ಗದಲ್ಲಿ ಉಳಿಸಿ ಸೌಲಭ್ಯ ವಿಸ್ತರಣೆ ಮಾಡಬೇಕು. ಇದಕ್ಕಾಗಿ 3 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಅಭಿವೃದ್ಧಿಆಧಾರವಾಗಿಟ್ಟುಕೊಂಡು ಹೊಸ ಜಿಲ್ಲೆ ರಚನೆಗೆ ಮುಂದಾಗಿದ್ದೇವೆ ಎಂದು ನಾಯಕರು ಹೇಳುತ್ತಿರುವ ಈ ಸಮಯದಲ್ಲಿ ತಾಲ್ಲೂಕಿಗೆ ಅಭಿವೃದ್ಧಿ ಆಧಾರದಲ್ಲಿ ನ್ಯಾಯ ಒದಗಿಸಬೇಕು ಎಂದು ಹೋರಾಟ ಮಾಡುತ್ತಿದ್ದೇವೆ’ ಎಂದು ನವ ನಿರ್ಮಾಣ ವೇದಿಕೆಯ ಬಿ. ವಿಜಯ್, ಕರ್ನಾಟಕ ರಕ್ಷಣಾ ವೇದಿಕೆಯ ಸೂರಮ್ಮನಹಳ್ಳಿ ನಾಗರಾಜ್, ಚಾಲಚೌಡಪ್ಪ ಹೇಳಿದರು.

‘ತಾಲ್ಲೂಕಿಗೆ 371 ಜೆ ಸೌಲಭ್ಯ ನೀಡಬೇಕು ಎಂದು ಪತ್ರ ಚಳವಳಿ, ಜಾಥಾ, ಪ್ರತಿಭಟನೆ ಮಾಡಲಾಗಿದೆ. ಈ ಬಗ್ಗೆ ಕಳೆದ ಲೋಕಸಭಾ ಅಧಿವೇಶನದಲ್ಲಿ ಸಂಸಸ ಬಿ.ಎನ್. ಚಂದ್ರಪ್ಪ ಪ್ರಸ್ತಾಪ ಮಾಡಿದ್ದರು. ಎಲ್ಲಾ ದೃಷ್ಟಿಯಿಂದಲೂ ತಾಲ್ಲೂಕು ಸೌಲಭ್ಯಕ್ಕೆ ಅರ್ಹವಾಗಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ.ಎಲ್ಲಾ ಪಕ್ಷದವರು, ಸಂಘ, ಸಂಸ್ಥೆಗಳು ಕೈಜೋಡಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕು’ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಬೆಳಗಲ್ ಈಶ್ವರಯ್ಯಸ್ವಾಮಿ, ತಿಪ್ಪೇಶ್, ಜನಶಕ್ತಿ ಸಂಘದ ರವಿಕುಮಾರ್ ಹೇಳಿದರು.

ಸಭೆಯಲ್ಲಿ ಬಹುತೇಕರು ಮೊಳಕಾಲ್ಮುರು ತಾಲ್ಲೂಕು ಈಗಿನಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಉಳಿಯಬೇಕು. ಕೇವಲ ಸೌಲಭ್ಯಕ್ಕಾಗಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಪ್ರಸ್ತಾಪ ಸರಿಯಲ್ಲ. ಸೌಲಭ್ಯ ವಿಸ್ತರಿಸಬೇಕು. ಈ ಬಗ್ಗೆ ನಡೆಯುವ ಹೋರಾಟಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ ಮುಂದಿನ ರೂಪಷೇಷ ಬಗ್ಗೆ ಚರ್ಚೆ ನಡೆಸಲು ನ.25 ರಂದು ಮತ್ತೆ ಸಭೆ ನಡೆಸಲು ನಿರ್ಧರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ರಾಮಕೃಷ್ಣ, ಗಂಗಾಧರ್, ಪತ್ರಕರ್ತ ಸಂಘದ ಅಧ್ಯಕ್ಷ ಕೆ. ಕೆಂಚಪ್ಪ, ಮರ್ಲಹಳ್ಳಿ ರವಿಕುಮಾರ್, ರಾಮುಲು, ಕಿರಣ್ ವಾಂಜ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT