ನಾಯಕನಹಟ್ಟಿ: ನಾಯಕನಹಟ್ಟಿ ಸಮೀಪದ ದೊಡ್ಡಕೆರೆಯ ಏರಿಯ ಮೇಲಿಂದ ಬುಧವಾರ ಎತ್ತಿನ ಬಂಡಿಯೊಂದು ಉರುಳಿಬಿದ್ದು, 5 ಜನರು ಗಾಯಗೊಂಡಿದ್ದಾರೆ.

ಬೋಸೇದೇವರಹಟ್ಟಿ ಗ್ರಾಮದ ಬೋರಯ್ಯ, ಬೋರಮ್ಮ, ರವಿತೇಜ, ಗೋವಿಂದ ಗಾಯಗೊಂಡ ವ್ಯಕ್ತಿಗಳಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ದಾಸರ ಬೋರಯ್ಯ ಎಂಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಉಳಿದವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೋಸೇದೇವರಹಟ್ಟಿ ಗ್ರಾಮದಿಂದ 2 ಎತ್ತಿನ ಗಾಡಿಗಳಲ್ಲಿ ಜನರು ಹಿರೆಕೆರೆ ಕಾವಲು ಪ್ರದೇಶದಲ್ಲಿ ಜರುಗುತ್ತಿದ್ದ ಚೌಡಮ್ಮನ ಜಾತ್ರೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಒಂದು ಎತ್ತಿನಗಾಡಿ ಮತ್ತೊಂದು ಗಾಡಿಯನ್ನು ಹಿಂದಿಕ್ಕಲು ವೇಗವಾಗಿ ಸಂಚರಿಸಿದಾಗ ನಿಯಂತ್ರಣ ಕಳೆದುಕೊಂಡು ದೊಡ್ಡಕೆರೆ ಏರಿಯಿಂದ ಕೆಳಕ್ಕುರುಳಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖ
ಲಿಸಲಾಗಿದೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.