ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಸ್ಥಾಪಿಸಿರುವ ಮಹಾಗಣಪತಿ ವಿಸರ್ಜನೆ ಅಂಗವಾಗಿ ಸೆ.13ರಂದು ಶೋಭಾಯಾತ್ರೆ ನಡೆಯಲಿದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿರುವ ಕಾರಣ ಪೊಲೀಸರು ನಗರದಾದ್ಯಂತ ಬಂದೋಬಸ್ತ್ ಏರ್ಪಡಿಸುತ್ತಿದ್ದಾರೆ. ಶೋಭಾಯಾತ್ರೆ ಅಂಗವಾಗಿ ನಗರಕ್ಕೆ ರಾಜ್ಯದ ವಿವಿಧೆಡೆಯಿಂದ ಪೊಲೀಸ್ ಸಿಬ್ಬಂದಿ ಬರಲಿದ್ದಾರೆ. ನಗರದಲ್ಲಿ ನಡೆಯುವ ಪ್ರತಿ ಚಟುವಟಿಕೆಯ ಮೇಲೂ ಪೊಲೀಸರು ಎಚ್ಚರ ವಹಿಸಲಿದ್ದಾರೆ. ಪ್ರತಿ ರಸ್ತೆಯಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದ್ದು ಹದ್ದಿನ ಕಣ್ಣಿಡಲಾಗಿದೆ.

ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹಾದು ಹೋಗುವ ಬಿ.ಡಿ ರಸ್ತೆ, ಹೊಳಲ್ಕೆರೆ ರಸ್ತೆಯಲ್ಲಿ ಅಪಾರ ಸಂಖ್ಯೆಯ ಜನರು ಸೇರಲಿದ್ದು, ಸಂಚಾರ ಸಾಧ್ಯವಾಗದ ಕಾರಣ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅಂದು ನಗರದ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ಚಳ್ಳಕೆರೆ ಗೇಟ್ನಿಂದ ಮಹಾತ್ಮಾಗಾಂಧಿ ವೃತ್ತ, ಹೊಳಲ್ಕೆರೆ ಮಾರ್ಗದ ಕಣಿವೆ ಕ್ರಾಸ್ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಬೆಂಗಳೂರು, ಚಳ್ಳಕೆರೆ, ಹೊಸಪೇಟೆ, ದಾವಣಗೆರೆ, ಹೊಳಲ್ಕೆರೆ, ಶಿವಮೊಗ್ಗ ಹಾಗೂ ಭೀಮಸಮುದ್ರ ಕಡೆಯಿಂದ ಬರುವ ಎಲ್ಲಾ ಮಾದರಿಯ ಲಘು ಮತ್ತು ಭಾರಿ ವಾಹನಗಳು, ಖಾಸಗಿ ಮತ್ತು ಸಾರಿಗೆ ಸಂಸ್ಥೆ ಬಸ್ಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಬಂದು ನಗರದ ಮೆದೇಹಳ್ಳಿ ರಸ್ತೆಯ ಮಾರ್ಗದಲ್ಲಿ ಬರಬೇಕು. ಮೆದೇಹಳ್ಳಿ ರಸ್ತೆ ಮತ್ತು ಜೆಎಂಐಟಿ ವೃತ್ತದ ಮೂಲಕ ನಗರಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಾಸ್ ಹೋಗಬೇಕು ಎಂದು ಸೂಚಿಸಲಾಗಿದೆ.

ಪ್ರಕರಣ ದಾಖಲು: ಶೋಭಾಯಾತ್ರೆ ಮೆರವಣಿಗೆ ಬೃಹತ್ ಶೋಭಾಯಾತ್ರೆಯಲ್ಲಿ 9 ಡಿ.ಜೆ ಭಾಗವಹಿಸಲಿವೆ ಎಂದು ಸುಳ್ಳು ಸುದ್ದಿಯನ್ನು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದ ಮಂಜುನಾಥ್ ಎಂಬಾತನ ವಿರುದ್ಧ ಮೊಳಕಾಲ್ಮುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಮಹಾಗಣಪತಿ ಬೃಹತ್ ಶೋಭಾಯಾತ್ರೆ ಸಂದರ್ಭದಲ್ಲಿ ಘರ್ಜಿಸಲು 9 ಡಿ.ಜೆಗಳು ಮುಂಬೈ, ಬೆಳಗಾವಿ, ಹುಬ್ಬಳ್ಳಿಯಿಂದ ಬರಲಿವೆ’ ಎಂದು ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿ ಗ್ರಾಮದ ಆರ್.ಮಂಜುನಾಥ ಫೇಸ್ಬುಕ್ನಲ್ಲಿ ಪ್ರಕಟಿಸಿದ್ದ. ಈ ಬಾರಿ ಡಿ.ಜೆ ಬಳಕೆಗೆ ಅವಕಾಶ ಇಲ್ಲದ ಕಾರಣ ಪೊಲೀಸರು ಈ ಪ್ರಕಟಣೆಯನ್ನು ಸುಳ್ಳುಸುದ್ದಿ ಎಂದು ಘೋಷಿಸಿದ್ದಾರೆ.

‘ಜನರು ಡಿ.ಜೆ. ಬಳಸುವಂತೆ ಪ್ರಚೋದನೆ ಮಾಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತ ಕೆಲಸ ಮಾಡಿದ್ದಾನೆ. ಮೊಳಕಾಲ್ಮುರು ಪೊಲೀಸ್ ಠಾಣೆಯಲ್ಲಿ ಆರ್.ಮಂಜುನಾಥ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

‘ಜಿಲ್ಲಾಡಳಿತ ಶೋಭಾಯಾತ್ರೆ ಮರವಣಿಗೆಯಲ್ಲಿ ಯಾವುದೇ ಡಿ.ಜೆ. ಬಳಕೆಗೆ ಅನುಮತಿ ನೀಡಿರುವುದಿಲ್ಲ. ಸಾರ್ವಜನಿಕರು ಸಾಮಾಜಿಕ ಜಾಲ ತಾಣಗಳಲ್ಲಿನ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು. ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಶೋಭಾಯಾತ್ರೆಗೆ ತೊಂದರೆ; ಇಂದು ಪ್ರತಿಭಟನೆ ‘ಗಣಪತಿ ಮಹೋತ್ಸವಕ್ಕೆ ಜಿಲ್ಲಾಡಳಿತ ವಿನಾಕಾರಣ ತೊಂದರೆ ನೀಡುತ್ತಿದೆ. ಇದನ್ನು ಖಂಡಿಸಿ ಸೆ.10ರಂದು ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ತಿಳಿಸಿದರು. ವಿಶ್ವಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಯಾವ ಕಾರಣಕ್ಕಾಗಿ ನಿರ್ಬಂಧ ಹೇರಲಾಗಿದೆ ಎಂಬ ಬಗ್ಗೆ ಇದುವರೆಗೂ ನಮಗೆ ಗೊತ್ತಿಲ್ಲ. ಅವರು ಯಾವುದೇ ಪ್ರಚೋದನಕಾರಿ ಭಾಷಣ ಮಾಡುವುದಿಲ್ಲ. ಬರೀ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಜಿಲ್ಲಾಡಳಿತ ನಿರ್ಭಂಧವನ್ನು ಹೇರಿರುವುದಿರುವುದು ಸರಿಯಾದ ಕ್ರಮವಲ್ಲ’ ಎಂದರು. ‘ಶೋಭಾಯಾತ್ರೆಯಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳು ಎಲ್ಲರಿಗೂ ಕೇಳಲಿ ಎಂಬ ಉದ್ದೇಶದಿಂದ ಹೆಚ್ಚುವರಿಯಾಗಿ ಧ್ವನಿ ಪೆಟ್ಟಿಗೆ ಅಳವಡಿಸಲು ಅವಕಾಶ ಕೇಳಲಾಗುತ್ತಿದೆ. ಆದರೆ ಇದಕ್ಕೆ ಸಮ್ಮತಿ ನೀಡಿಲ್ಲ. ಇದನ್ನು ವಿರೋಧಿಸಿ ಸೆ. 10 ರ ಸಂಜೆ 4ಗಂಟೆಯಿಂದ ಮಹಾ ಗಣಪತಿ ಮಂಟಪದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು’ ಎಂದರು. ಉತ್ಸವ ಸಮಿತಿಯ ಅಧ್ಯಕ್ಷರಾದ ಶರಣ ಕುಮಾರ್ ಮುಖಂಡ ಕೇಶವ್ ಇದ್ದರು.

ಶಕ್ತಿದೇವತೆಗಳ ಸಮಾಗಮ ಚಿತದುರ್ಗ: ವಿಶ್ವ ಹಿಂದೂ ಪರಿಷತ್ - ಬಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಗಣಪತಿ ಮಹೋತ್ಸವದ ಪ್ರಯುಕ್ತ ನಗರದ ಶಕ್ತಿ ದೇವತೆಗಳು ಮಹಾಗಣಪತಿ ಮಂಟಪದಲ್ಲಿ ಮಂಗಳವಾರ ಸಮಾಗಮಗೊಂಡವು. ಸಂಪ್ರದಾಯದಂತೆ ಸಿಹಿನೀರು ಹೊಂಡದಲ್ಲಿ ಬೆಳಿಗ್ಗೆ ಗಂಗಾ ಪೂಜೆ ನೆರವೇರಿಸಿದ ಬಳಿಕ ವೈಭವದ ಮೆರವಣಿಗೆ ಮೂಲಕ ಮಂಟಪಕ್ಕೆ ಕರೆ ತರಲಾಯಿತು. ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ತ್ರಿಪುರ ಸುಂದರಿ ತಿಪ್ಪಿನ ಘಟ್ಟಮ್ಮ ಕಾಳಿಕಾ ಮಠೇಶ್ವರಿ ಬನಶಂಕರಿ ದೇವಿ ಮಲೆನಾಡ ಚೌಡೇಶ್ವರಿ ದುರ್ಗಾದೇವಿ ಕನ್ನಿಕಾ ಪರಮೇಶ್ವರಿ ಬುಡ್ಡಾಂಬಿಕೆ ದೇವಿ ಕಣಿವೆ ಮಾರಮ್ಮ ಸಿಗಂದೂರು ಚೌಡೇಶ್ವರಿ ದೇವತೆಗಳು ಮಂಟಪಕ್ಕೆ ಆಗಮಿಸಿದವು. ಸಾಲಾಗಿ ಬರುತ್ತಿದ್ದ ದೇವತೆಗಳನ್ನು ಭಕ್ತರು ಕಣ್ತುಂಬಿಕೊಂಡರು. ಮೆರವಣಿಗೆಯಲ್ಲಿ ಕಹಳೆ ಉರುಮೆ ಡೊಳ್ಳು ನಾದಸ್ವರ ಸೇರಿ ಮತ್ತಿತರ ಜನಪದ ಕಲಾ ಪ್ರಕಾರಗಳು ಮೇಳೈಸಿದವು. ಸಿಹಿನೀರು ಹೊಂಡದ ಬಳಿಯಿಂದ ಹೊರಟ ಮೆರವಣಿಗೆ ಹೊಳಲ್ಕೆರೆ ರಸ್ತೆ ಸಂಗೊಳ್ಳಿ ರಾಯಣ್ಣ ವೃತ್ತ ಗಾಂಧಿ ವೃತ್ತ ಎಸ್ಬಿಐ ವೃತ್ತ ಪ್ರವಾಸಿ ಮಂದಿರ ಅಂಬೇಡ್ಕರ್ ವೃತ್ತ ಮದಕರಿ ನಾಯಕ ವೃತ್ತದ ಮಾರ್ಗವಾಗಿ ಮಹಾಗಣಪತಿ ಮಹೋತ್ಸವದ ಮಂಟಪ ತಲುಪಿತು. ಬುಧವಾರ ಹೋಮ ನೆರವೇರಿದ ಬಳಿಕ ದೇವಿಯರು ತಮ್ಮ ಸ್ವಸ್ಥಾನಗಳಿಗೆ ಹಿಂದಿರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.