ಹಿರಿಯೂರು: ‘ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದ ಮುಂಗಾರು ಹಂಗಾಮಿನಲ್ಲಿ ಶೇ 75ಕ್ಕಿಂತ ಹೆಚ್ಚು ಭಾಗ ಬಿತ್ತನೆ ಆಗದಿರುವ ಕಾರಣಕ್ಕೆ ವಿಮಾ ಕಂತು ಪಾವತಿಸಿರುವ ಎಲ್ಲಾ ರೈತರಿಗೆ ಫಸಲ್ ಬಿಮಾ ಯೋಜನೆಯಡಿ ವಿಮಾ ಹಣ ಪಾವತಿಸಬೇಕು’ ಎಂದು ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಒತ್ತಾಯಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಹಶೀಲ್ದಾರ್ ಸಿದ್ದೇಶ್ ಅಧ್ಯಕ್ಷತೆಯಲ್ಲಿ ಮುಂಗಾರು ಬೆಳೆ ವಿಮೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಬಹುತೇಕ ಭಾಗಗಳಲ್ಲಿ ಮೂರು ತಿಂಗಳಿಂದ ಮಳೆಯಾಗಿಲ್ಲ. ಹೀಗಾಗಿ ಬಿತ್ತನೆ ಮಾಡಿದ್ದ ಶೇ 25ರಷ್ಟು ಬೆಳೆಯೂ ಒಣಗಿ ಹೋಗಿದೆ. ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ ಮತ್ತು ಶೇಂಗಾ ಬಿತ್ತನೆ ಆಗದ ಕಾರಣಕ್ಕೆ ನಿಯಮಾನುಸಾರ ಕಂತು ಪಾವತಿಸಿರುವ ಎಲ್ಲಾ ರೈತರಿಗೆ ಶೇ 25ರಷ್ಟು ವಿಮಾ ಪರಿಹಾರ ನೀಡಬೇಕು. ಹಿಂದಿನ ವರ್ಷ ಕಡಲೆ ಬೆಳೆ ವಿಫಲಗೊಂಡ ರೈತರಿಗೆ ಇದುವರೆಗೂ ವಿಮೆ ಹಣ ಪಾವತಿಸಿಲ್ಲ. ಕಂತು ಹಣ ತುಂಬಿರುವ ಎಲ್ಲ ರೈತರಿಗೂ ಸೋಮವಾರದ ಒಳಗೆ ವಿಮಾ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ವಿಮಾ ಕಂಪನಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ‘ಮಳೆ ಬಾರದೆ ರೈತರು ಬಿತ್ತನೆ ಮಾಡದಿರುವ ಕಾರಣಕ್ಕೆ ಪ್ರಸ್ತುತ ಶೇ 25ರಷ್ಟು ವಿಮಾ ಹಣ ಬರಲಿದೆ. ಬಿತ್ತನೆ ಮಾಡಿರುವ ರೈತರು ಮುಂದಿನ ದಿನಗಳಲ್ಲಿ ಬೆಳೆ ನಷ್ಟವಾದರೆ ಮಾತ್ರ ನೂರಕ್ಕೆ ನೂರರಷ್ಟು ವಿಮಾ ಹಣ ಬರಲಿದೆ. ಸಭೆಯಲ್ಲಿ ಕೈಗೊಳ್ಳುವ ಒಮ್ಮತದ ತೀರ್ಮಾನವನ್ನು ಸರ್ಕಾರಕ್ಕೆ ವರದಿ ಕಳಿಸುತ್ತೇನೆ’ ಎಂದು ಸಭೆಗೆ ಮಾಹಿತಿ ನೀಡಿದರು.

ತಹಶೀಲ್ದಾರ್ ಸಿದ್ದೇಶ್ ಮಾತನಾಡಿ, ‘ಪ್ರಸ್ತುತ ಬಿತ್ತನೆ ಆಗದಿರುವ ಕಾರಣಕ್ಕೆ ಕಂತು ಪಾವತಿಸಿರುವ ಎಲ್ಲಾ ರೈತರಿಗೂ ಶೇ 25 ರಷ್ಟು ಹಣ ಬರುತ್ತದೆ. ಮುಂದೆ ಬೆಳೆ ನಷ್ಟ ಆಗದೇ ಇದ್ದರೆ ಎಲ್ಲರಿಗೂ ಪರಿಹಾರ ಬರುವುದಿಲ್ಲ. ಹೀಗಾಗಿ ರೈತರು ಒತ್ತಾಯಿಸುತ್ತಿರುವಂತೆ ಶೇ 25ರಷ್ಟು ವಿಮಾ ಹಣ ಎಲ್ಲಾ ರೈತರಿಗೂ ಬರುವಂತೆ ಶಿಫಾರಸು ಮಾಡಲಾಗುವುದು. ಬೆಳೆ ವಿಮೆ ಕಂಪನಿಯವರು ತಕ್ಷಣ ಹಣ ಪಾವತಿಸಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ಕೆ.ಸಿ. ಹೊರಕೇರಪ್ಪ, ದಸ್ತಗೀರ್ ಸಾಬ್, ಆಲೂರು ಸಿದ್ದರಾಮಣ್ಣ, ಕಂದಿಕೆರೆ ಜಗದೀಶ್, ಎಚ್. ಆರ್. ತಿಮ್ಮಯ್ಯ, ಸುರೇಶ್ ಬಾಬು, ಸಂತೋಷ್, ಲಕ್ಷ್ಮೀಕಾಂತ್ ಹಾಗೂ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.