ದಲೈಲಾಮಾ ಅವರು ಚಿತ್ರದುರ್ಗದ ಕಾರ್ಯಕ್ರಮ ಕುರಿತು ಸಂದೇಶ ಕಳುಹಿಸಿದ್ದರು. ‘ಚಿತ್ರದುರ್ಗದ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ನನ್ನ ದೇಶದ ಜನರು ನಿರಾಶ್ರಿತರಾಗಿ ಇದ್ದಾಗ ಬೆಂಬಲಕ್ಕೆ ಬಂದ ಮುಖ್ಯಮಂತ್ರಿಯವರ ಪೈಕಿ ಎಸ್.ನಿಜಲಿಂಗಪ್ಪ ಅವರು ಮುಂಚೂಣಿಯಲ್ಲಿದ್ದರು. ಅವರನ್ನು ಸದಾ ನೆನೆಯುತ್ತೇನೆ’ ಎಂದು ತಿಳಿಸಿದ್ದಾರೆ. ‘ಮುಂದಿನ ದಲೈಲಾಮಾರ ಆಯ್ಕೆಯ ಅಧಿಕಾರ ಟಿಬೆಟ್‌ನ ಜನರಿಗೆ ಮಾತ್ರವಿದೆ. ಈ ವಿಚಾರದಲ್ಲಿ ಚೀನಾದ ಮಧ್ಯಪ್ರವೇಶ ಬೇಡ. ಈ ನಿರ್ಣಯವನ್ನು ಚಿತ್ರದುರ್ಗದ ಸಭೆ ಅಂಗೀಕರಿಸಬೇಕು’ ಎಂಬ ಸಂದೇಶವನ್ನು ಸಭೆಯಲ್ಲಿ ಓದಲಾಯಿತು.