ಹಿರಿಯೂರು: ಮುದ್ದೆ ಕೋಲಿನಿಂದ ಹೊಡೆದು ಪತಿಯೇ ಪತ್ನಿಯನ್ನು ಹತ್ಯೆಗೈದ ಘಟನೆ ತಾಲ್ಲೂಕಿನ ಎಂ.ಡಿ. ಕೋಟೆ ಗ್ರಾಮದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ವಿಜಯಲಕ್ಷ್ಮಿ (30) ಕೊಲೆಯಾದ ಮಹಿಳೆ. ಆರೋಪಿ ಬಸವರಾಜ್ ಎಂಬಾತನನ್ನು ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನಿತ್ಯ ಕುಡಿದು ಮನೆಗೆ ಬರುತ್ತಿದ್ದ ಪತಿಯನ್ನು ಹೆಂಡತಿ ಪ್ರಶ್ನಿಸಿದ್ದಳು. ಈ ಗಲಾಟೆ ವಿಕೋಪಕ್ಕೆ ತಿರುಗಿ ಮುದ್ದೆ ಕೋಲಿನಿಂದ ಹೆಂಡತಿಗೆ ಹೊಡೆದಿದ್ದಾನೆ. ಬಲವಾದ ಏಟು ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಸಮಯವಾಗಿದ್ದರಿಂದ ಯಾರಿಗೂ ಮಾಹಿತಿ ತಿಳಿದಿರಲಿಲ್ಲ. ಬೆಳಿಗ್ಗೆ ಮಕ್ಕಳು ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಪರಾರಿಯಾಗಿದ್ದ ಆರೋಪಿಯನ್ನು ಪೊಲಿಸರು ಬಂಧಿಸಿದ್ದಾರೆ. ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಮೂಲತಃ ಚಳ್ಳಕೆರೆ ತಾಲ್ಲೂಕಿನ ಗೊರ್ಲತ್ತು ಗ್ರಾಮದ ಬಸವರಾಜ ಲಾರಿ ಚಾಲಕನಾಗಿದ್ದ. ಎಂ.ಡಿ. ಕೋಟೆಯ ವಿಜಯಲಕ್ಷ್ಮಿ ಅವರನ್ನು ವರಿಸಿದ ಬಳಿಕ ಇಲ್ಲಿಯೇ ವಾಸವಾಗಿದ್ದ. ದಂಪತಿಗೆ ಸಿದ್ದಾರ್ಥ್ (9), ಸನ್ನಿಧಿ (6), 9 ತಿಂಗಳ ಮಗು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.