ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ | ಬೋನಿಗೆ ಬಿದ್ದ ಮತ್ತೊಂದು ಕರಡಿ

Published 8 ಜುಲೈ 2023, 5:08 IST
Last Updated 8 ಜುಲೈ 2023, 5:08 IST
ಅಕ್ಷರ ಗಾತ್ರ

ಹೊಸದುರ್ಗ (ಚಿತ್ರದುರ್ಗ): ಇಲ್ಲಿನ ಚನ್ನಸಮುದ್ರ (ಪುರ) ರಸ್ತೆಯ ಗುಡ್ಡದಲ್ಲಿ ಶನಿವಾರ ನಸುಕಿನಲ್ಲಿ ಮತ್ತೊಂದು ಕರಡಿ ಬೋನಿಗೆ ಬಿದ್ದಿದೆ. ನಾಲ್ಕರಲ್ಲಿ ಎರಡು ಕರಡಿ ಸೆರೆಯಾಗಿದ್ದು, ಮತ್ತೆರಡು ಕರಡಿ ಸೆರೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ನಡೆಸುತ್ತಿದೆ.

ಬೆಂಗಳೂರಿನಿಂದ ಬಂದಿದ್ದ ಅರಣ್ಯ ಇಲಾಖೆಯ ವಿಶೇಷ ತಂಡವು ಸ್ಥಳೀಯರ ಸಹಕಾರದೊಂದಿಗೆ ಶುಕ್ರವಾರ ಕರಡಿಯೊಂದನ್ನು ಸೆರೆ ಹಿಡಿದಿತ್ತು. ಉಳಿದವು ಪಟ್ಟಣದ ಸುತ್ತಲಿನ ಬೆಟ್ಟದಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು.

ಪಟ್ಟಣದ ಗೌಸಿಯಾ ನಗರ, ಕಲ್ಲೇಶ್ವರ ಬಡಾವಣೆ, ಬನಶಂಕರಿ ಬಡಾವಣೆ, ಸಿದ್ದರಾಮನಗರ, ಕುಂಚಿಟಿಗ ಮಠದ ಸಮೀಪ ಎರಡು ವಾರಗಳಿಂದ ಕರಡಿಗಳು ಕಾಣಿಸಿಕೊಂಡಿದ್ದವು. ಈ ಬಡಾವಣೆಯ ನಿವಾಸಿಗಳು ಭಯಭೀತರಾಗುವಂತೆ ಮಾಡಿದ್ದವು. ಕರಡಿ ಸೆರೆಗಾಗಿ ಅರಣ್ಯ ಇಲಾಖೆಯು ಗುರುವಾರ ಬೆಂಗಳೂರಿನಿಂದ ವಿಶೇಷ ತಂಡ ಕರೆಸಿತ್ತು. ಕರಡಿ ಸಂಚರಿಸುವ ಸ್ಥಳಗಳಲ್ಲಿ ಬೋನ್ ಇರಿಸಲಾಗಿತ್ತು

ಹೊಸದುರ್ಗ | ಬೋನಿಗೆ ಬಿದ್ದ ಮತ್ತೊಂದು ಕರಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT