ಸಂಜೆಯಾಗುತ್ತಿದ್ದಂತೆ ಜೋಗಿಮಟ್ಟಿ ರಸ್ತೆಯಲ್ಲಿ ದೂಳು ಹೊಗೆ ಆವರಿಸಿಕೊಂಡಿರುವುದು
ಸುಣ್ಣದಲ್ಲಿ ಅಲ್ಯುಮಿನಿಯಂ ಆಕ್ಸೈಡ್ ಹೆಚ್ಚಾಗಿದೆ. ಹೀಗಾಗಿ ಶ್ವಾಸನಾಳಕ್ಕೆ ತೊಂದರೆಯಾಗುತ್ತದೆ. ಇದು ಕಿಡ್ನಿಯ ಕಾರ್ಯಕ್ಷಮತೆಯನ್ನೂ ಹಾಳುಗೆಡವುತ್ತದೆ. ದೃಷ್ಟಿದೋಷವೂ ಕಾಡುತ್ತದೆ
ಡಾ.ಸುರೇಶ್ ಶ್ವಾಸಕೋಶ ತಜ್ಞ
ಸುಣ್ಣದ ಗುಮ್ಮಿಗಳಿಂದ ಆಗುತ್ತಿರುವ ತೊಂದರೆಯನ್ನು ಪರಿಶೀಲಿಸುತ್ತೇನೆ. ಗುಮ್ಮಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು
ಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಸ್ಮಾರಕಗಳ ರಕ್ಷಣೆಗೆ ಬೇಕು ಸುಣ್ಣ
ಎಲೆ–ಅಡಿಕೆ ತಾಂಬೂಲ ಮೆಲ್ಲುವವರು ಹಳೆಯ ಮನೆಗಳ ಗೋಡೆಗಳಿಗೆ ಕೋಟೆ ದೇವಸ್ಥಾನಗಳ ಗೋಡೆಗಳಿಗೆ ಹಬ್ಬ– ಹರಿದಿನಗಳಲ್ಲಿ ಸುಣ್ಣ ಬಳಿಯುವುದು ವಾಡಿಕೆ. ಹೀಗಾಗಿ ಸುಣ್ಣಕ್ಕೆ ಬೇಡಿಕೆ ಇದೆ. ನಗರದ ಸುಣ್ಣಗಾರರು ಇಲ್ಲಿನ ಗುಮ್ಮಿಗಳಿಂದ ಕೋಲಾರ ಬಳ್ಳಾರಿ ಹಂಪಿ ತುಮಕೂರು ದಾವಣಗೆರೆ ಮತ್ತಿತರ ಜಿಲ್ಲೆಗಳಿಗೆ ಸುಣ್ಣ ಕಳುಹಿಸುತ್ತಾರೆ. ಗೋವಾದ ಪುರಾತನ ಚರ್ಚ್‌ಗಳಿಗೂ ಇಲ್ಲಿಂದ ಸುಣ್ಣ ರವಾನೆಯಾಗುತ್ತದೆ. ‘ಕ್ಯಾದಿಗೆರೆ ಬುರುಜನರೊಪ್ಪ ಪಾಲವ್ವನಹಳ್ಳಿ ಗೌಡಗೆರೆ ನೆಲಗೇತನಹಟ್ಟಿ ಕಡೆಗಳಿಂದ ಸುಣ್ಣದ ಕಲ್ಲು ತರಿಸುತ್ತೇವೆ. 4 ಟನ್‌ನ ಒಂದು ಲೋಡು ಸುಣ್ಣದ ಕಲ್ಲು ತಂದರೆ 2 ಟನ್ ಸುಣ್ಣ ಬರುತ್ತದೆ’ ಎಂದು ಸಣ್ಣಗಾರರೊಬ್ಬರು ತಿಳಿಸಿದರು.