ಚಿತ್ರದುರ್ಗದ ಮದಕರಿಪುರ ಲಂಬಾಣಿ ಹಟ್ಟಿ ಶಾಲೆಯಲ್ಲಿ ತರಗತಿಯೇ ಅಡುಗೆಮನೆ ಆಗಿರುವುದು
ಧರ್ಮಪುರದ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಬಯಲಿನಲ್ಲೇ ಮಧ್ಯಾಹ್ನದ ಬಿಸಿಯೂಟ ಬಡಿಸುತ್ತಿರುವುದು
ಬಿಸಿಯೂಟಕ್ಕೆ ಎಲ್ಲಿಯೂ ಆಹಾರ ಸಾಮಾಗ್ರಿ ಕೊರತೆ ಎದುರಾಗಿಲ್ಲ. ಎರಡ್ಮೂರು ದಿನದಿಂದ ಎಲ್ಲ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ. ಸಾಮಾಗ್ರಿ ಕಡಿಮೆ ಬಂದ ಶಾಲೆಗಳು ಗಮನಕ್ಕೆ ತಂದ ಕೂಡಲೇ ತಲುಪಿಸಲಾಗುತ್ತಿದೆ.
ಎನ್.ಅಶ್ವಥ್ ನಾರಾಯಣ್, ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ
ಈ ಮೊದಲು ಪ್ರತಿ ತಿಂಗಳು ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿತ್ತು. ಈಗ ಟೆಂಡರ್ ಪ್ರಕ್ರಿಯೆ ಮೂರು ತಿಂಗಳಿಗೊಮ್ಮೆ ನಡೆಯುವುದರಿಂದ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ.
ಸಿ.ಮಹೇಶ್ವರರೆಡ್ಡಿ, ಸಹಾಯಕ ನಿರ್ದೇಶಕ, ತಾಲ್ಲೂಕು ಅಕ್ಷರ ದಾಸೋಹ
ಗಡಿಭಾಗ ಹಾಗೂ ಕಪಿಲೆ ಶಾಲೆಗಳ ಮಕ್ಕಳಿಗೆ ಬಿಸಿಯೂಟ ವರದಾನವಾಗಿದೆ. ಆದರೆ ಅಸಮರ್ಪಕವಾದ ಆಹಾರ ಸಾಮಾಗ್ರಿಗಳ ಪೂರೈಕೆಯಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ಇಲಾಖೆ ಎಚ್ಚತ್ತುಕೊಳ್ಳಬೇಕು.
ಬಿ.ಕಾಟಯ್ಯ, ಗ್ರಾಮಸ್ಥ, ಮಲ್ಲೂರಹಳ್ಳಿ
ಬಿಸಿಯೂಟಕ್ಕೆ ಸರಬರಾಜಾಗುವ ಸಾಮಾಗ್ರಿಗಳು ಕಳಪೆಯಿಂದ ಕೂಡಿದೆ ಎಂಬ ಆರೋಪಗಳು ಮಕ್ಕಳಿಂದ ಕೇಳಿ ಬರುತ್ತಿದೆ. ಹಾಗಾಗಿ ಬಿಸಿಯೂಟಕ್ಕೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸಕಾಲದಲ್ಲಿ ವಿತರಿಸಲು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು.
ಬಿ.ಟಿ.ಪ್ರಕಾಶ್, ಅಧ್ಯಕ್ಷ, ರಾಷ್ಟ್ರೀಯ ಕಿಸಾನ್ ಸಂಘ ಹೋಬಳಿ ಘಟಕ
ಮಧ್ಯಾಹ್ನದ ಬಿಸಿಯೂಟಕ್ಕೆ ಗುಣಮಟ್ಟದ ಆಹಾರ ಪದಾರ್ಥ ನೀಡಬೇಕು. ಕೆಲವೊಮ್ಮೆ ಬೆಳೆ ಕಳಪೆಯಾಗಿರುವುದು ಗಮನಕ್ಕೆ ಬಂದಿದೆ. ಜತೆಗೆ ಮೊಟ್ಟೆ ಬೇಯಿಸಿ ಸಿಪ್ಪೆ ಬಿಡಿಸಲು 30 ಪೈಸೆ ನೀಡುವುದನ್ನು ಆದೇಶಗೊಳಿಸಬೇಕು.
ಎನ್.ನಿಂಗಮ್ಮ, ಅಧ್ಯಕ್ಷೆ, ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಘಟಕ