ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಆರಂಭ

Published 25 ಮಾರ್ಚ್ 2024, 13:24 IST
Last Updated 25 ಮಾರ್ಚ್ 2024, 13:24 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಸೋಮವಾರದಿಂದ ಆರಂಭವಾಯಿತು. ಇಲ್ಲಿನ ಎಪಿಎಂಸಿ ಉಪಮಾರುಕಟ್ಟೆಯಲ್ಲಿ ನೋಂದಾಯಿತ ರೈತರಿಂದ ರಾಗಿ ಖರೀದಿಸಲಾಯಿತು.

ಕಳೆದ ವರ್ಷ ಮುಂಚಿತವಾಗಿ ಖರೀದಿ ಆರಂಭವಾಗಿತ್ತು. ಆದರೆ, ಈ ಬಾರಿ ಟೆಂಡರ್‌ ಪ್ರಕ್ರಿಯೆ ತಡವಾಗಿದ್ದರಿಂದ  ಖರೀದಿಯೂ ತಡವಾಗಿದೆ. ನೋಂದಣಿ ಮಾಡಿಸಿರುವ ತಾಲ್ಲೂಕಿನ ರೈತರು ತಾವು ಬೆಳೆದ ರಾಗಿಯನ್ನು ಉಪ ಮಾರುಕಟ್ಟೆಗೆ ತಂದು ತೂಕ ಮಾಡಿ, ಮಾರಾಟ ಮಾಡಬೇಕು ಎಂದು ಖರೀದಿ ಕೇಂದ್ರದ ಅಧಿಕಾರಿ ಎ. ಮಾರುತಿ ಮನವಿ ಮಾಡಿದರು.

ಮೊದಲ ದಿನ 8 ಜನ ರೈತರಿಂದ 250 ಕ್ವಿಂಟಲ್‌ ರಾಗಿ ಖರೀದಿಸಲಾಯಿತು. ಈವರೆಗೆ 430 ರೈತರು ನೋಂದಣಿ ಮಾಡಿಸಿದ್ದಾರೆ. ತಾಲ್ಲೂಕು ಆಹಾರ ಶಿರಸ್ತೇದಾರ್‌ ಲಿಂಗರಾಜ್‌ ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT