ಮೊಳಕಾಲ್ಮುರು: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷ (ಎಸ್ಪಿ) ತಾಲ್ಲೂಕಿನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎ. ಜಯಣ್ಣ ಹೇಳಿದರು.

ಶನಿವಾರ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿಯೂ ಪಕ್ಷ ಸ್ಪರ್ಧಿಸುವ ನಿರ್ಧಾರ ಮಾಡಿದ್ದು, ಮೀಸಲಾತಿ ಘೋಷಣೆಯಾದ ನಂತರ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗುವುದು. ಈ ಭಾಗದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನ ಹೆಚ್ಚಿದ್ದು, ಇವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಪಕ್ಷ ಬದ್ಧವಾಗಿದೆ ಎಂದರು.

ಉಪಾಧ್ಯಕ್ಷ ಬಿ. ತಿಪ್ಪೇಸ್ವಾಮಿ, ಬಿ. ಬಾಲರಾಜ್, ಮುಖಂಡರಾದ ಜಿ.ಸಿ. ನಾಗರಾಜ್ ರಾಂಪುರ, ಪಿ.ಟಿ. ಹಟ್ಟಿ ತಮ್ಮಣ್ಣ, ಪಾಪಣ್ಣ, ಪಾಲಣ್ಣ, ಬೋರಯ್ಯ, ಸೂರಯ್ಯ, ದಡ್ಡಯ್ಯ, ಶ್ರೀನಿವಾಸ್ ಇದ್ದರು.