ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರಿನಲ್ಲಿ ಮುಂಗಾರು ಬಿತ್ತನೆ ಆರಂಭ, ಗುರಿ ತಲುಪುವ ನಿರೀಕ್ಷೆ

ಬಿತ್ತನೆಗೆ ಅನುಕೂಲಕರ ಮಳೆ
Last Updated 29 ಜುಲೈ 2022, 3:54 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಬುಧವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ಅನುಕೂಲ ಕಲ್ಪಿಸಿದೆ.

ತಡರಾತ್ರಿ 12 ಗಂಟೆಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ರಾಂಪುರ ಮಳೆಮಾಪನ ಕೇಂದ್ರದಲ್ಲಿ 50 ಮಿ.ಮೀ., ದೇವಸಮುದ್ರ ಕೇಂದ್ರದಲ್ಲಿ 26 ಮಿ.ಮೀ., ಬಿ.ಜಿ. ಕೆರೆ ಕೇಂದ್ರದಲ್ಲಿ 40 ಮಿ.ಮೀ., ರಾಯಾಪುರ ಕೇಂದ್ರದಲ್ಲಿ 29 ಹಾಗೂ ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 12 ಮಿ.ಮೀ. ಮಳೆ ದಾಖಲಾಗಿದೆ ಎಂದು ತಾಲ್ಲೂಕು ಕಚೇರಿ ಮೂಲಗಳು ತಿಳಿಸಿವೆ.

15-20 ದಿನಗಳ ಹಿಂದೆ ಬಿದ್ದಿದ್ದ ಮಳೆಗೆ ದೇವಸಮುದ್ರ ಹೋಬಳಿಯಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಈ ಮಳೆಗೆ ಅಲ್ಲಿ ಶೇಂಗಾ ಬಿತ್ತನೆ ಮಾಡಲು ಅನುಕೂಲವಾಗಿದೆ. ಮೊಳಕಾಲ್ಮುರು ಕಸಬಾದಲ್ಲಿ ಇದುವರೆಗೆ ಹದ ಮಳೆಬಾರದೆ ತೀವ್ರ ತೊಂದರೆಯಾಗಿ ರೈತರು ಆತಂಕದಲ್ಲಿದ್ದರು. ಈಗ ಬಂದಿರುವ ಮಳೆಯು ಬಾಕಿ ಇರುವ ಹೊಲ ಸಿದ್ಧತೆ, ಶೇಂಗಾ ಬಿತ್ತನೆಗೆ ಸಹಕಾರಿಯಾಗಿದೆ. ಆಗಸ್ಟ್‌ 5ರವರೆಗೆ ಶೇಂಗಾ ಬಿತ್ತನೆ ಮಾಡಲು ಅವಕಾಶವಿದ್ದು, ಬಿತ್ತನೆ ಗುರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ವಿ.ಸಿ. ಉಮೇಶ್ ತಿಳಿಸಿದರು.

ಈ ವರ್ಷ ಮುಂಗಾರಿನಲ್ಲಿ ಒಟ್ಟು 32,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 27,050 ಹೆಕ್ಟೇರ್‌ನಲ್ಲಿ ಶೇಂಗಾ 3,400 ಹೆಕ್ಟೇರ್‌ನಲ್ಲಿ ಏಳದಳ ಧಾನ್ಯ ಬಿತ್ತನೆ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT