ಹಿರಿಯೂರು: ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸಬೇಕು ಎಂದು ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದರು.

ನಗರದ ಗಾಂಧಿವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಜರಂಗದಳದ ವತಿಯಿಂದ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಸೋಮವಾರ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯರು ಶಾಂತಿ, ಸಹಿಷ್ಣುತೆ, ಭ್ರಾತೃತ್ವಕ್ಕೆ ಹೆಸರಾದವರು. ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಹಿಂದೂಗಳ ರಕ್ಷಣೆ ಮಾಡುವ ಮೂಲಕ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

ಬಾಂಗ್ಲಾದೇಶದ ಸೇನೆ ಮತ್ತು ಪೊಲೀಸ್ ಠಾಣೆಗಳ ಮೇಲಿನ ದಾಳಿ ಕೂಡ ಆಘಾತಕಾರಿ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿಯವರೂ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಮಾನವ ಹಕ್ಕು ಆಯೋಗ ಕೂಡಲೇ ಅಲ್ಲಿಗೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ತವಂದಿ ಶ್ರೀಶೈಲ ಶಾಖಾ ಮಠದ ರೇಣುಕಾ ಸ್ವಾಮೀಜಿ, ಕುಸುಮಾದೇಸಾಯಿ, ಹರೀಶ್, ಎಚ್.ಎಂ. ಪ್ರಭಾಕರ್, ಶ್ರವಣಸಿಂಗ್, ಗೋವಿಂದ ಸಿಂಗ್, ರವಿಚಂದ್ರನ್, ರಾಜೇಂದ್ರ ದೇಸಾಯಿ, ಪ್ರಶಾಂತ, ಗೋವಿಂದಾಚಾರ್, ವೆಂಕಟೇಶ್, ಗೋವರ್ಧನ್, ವಿನಯ್, ನಾಮದೇವಮೂರ್ತಿ, ನಾಗೇಂದ್ರಯಾದವ್, ವೇದಮೂರ್ತಿ ಯಾದವ್, ವಕೀಲ ರಂಗನಾಥ, ರಾಘವೇಂದ್ರ, ಪಾರ್ಥ ಯಾದವ್, ಚೇತನ್, ಯೋಗೇಶ, ಆರ್. ಲಕ್ಷ್ಮಿಕಾಂತ, ವಿಶ್ವನಾಥ್, ಎಂ.ಎಸ್.ರಾಘವೇಂದ್ರ, ಕೇಶವಮೂರ್ತಿ, ಚಂದ್ರಹಾಸ, ರಘು, ಹರ್ಷ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.