ಧರ್ಮಪುರ: ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು ಎಂಬ ಮಾತಿಗೆ ಇಲ್ಲಿನ ಪ್ರಧಾನ ರಸ್ತೆಗೆ ಹೊಂದಿಕೊಂಡಿರುವ ಕೆರೆ ಕೋಡಿ ಅಪವಾದದಂತಿದೆ. ಇಲ್ಲಿ ರಾಶಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದ್ದು, ಹಂದಿಗಳ ವಾಸ ಸ್ಥಾನವಾಗಿದೆ. ನಾಗರಿಕರಿಗೆ ರೋಗ ಹರಡುವ ಭೀತಿಯೂ ಎದುರಾಗಿದೆ.

ಧರ್ಮಪುರ ಗ್ರಾಮ ಪಂಚಾಯಿತಿಯಲ್ಲಿ 10,000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಟ್ಟಣದ ಸ್ಥಾನಮಾನ ಹೊಂದಲೂ ಇದು ಅಣಿಯಾಗುತ್ತಿದೆ. ಈಗಾಗಲೇ ಮೂರು ವರದಿಗಳಲ್ಲಿ ತಾಲ್ಲೂಕು ರಚನೆಗೆ ಶಿಫಾರಸು ಮಾಡಲಾಗಿದೆ. ಆದರೆ, ಇಲ್ಲಿನ ಸ್ಥಳೀಯ ಆಡಳಿತ ಸ್ವಚ್ಛತೆ ಮರೆತಂತಿದೆ. ಕೆರೆ ಕೋಡಿ ಹರಿಯುವ ಜಾಗ ಸಂಪೂರ್ಣ ಪ್ಲಾಸ್ಟಿಕ್ ಮಯವಾಗಿದ್ದು, ಇದರಿಂದ ಅನೇಕ ಸಾಂಕ್ರಾಮಿಕ ರೋಗ ಹರಡುವಂತಾಗಿದೆ.

ವಾಂತಿ, ಜ್ವರ, ಟೈಫಾಯ್ಡ್, ಚಿಕುನ್ ಗೂನ್ಯಾ, ಡೆಂಗಿ ಪ್ರಕರಣಗಳು ಕಾಣಿಸಿಕೊಂಡಿದ್ದು, ನಾಗರಿಕರು ಪರಿತಪಿಸುವಂತಾಗಿದೆ.

ಹೋಟೆಲ್, ಬಾರ್, ಅಂಗಡಿಗಳ ಕಾರುಬಾರು: ಕೆರೆ ಕೋಡಿಯ ಜಾಗದಲ್ಲಿ ಅನೇಕ ಹೋಟೆಲ್, ಟೀ ಅಂಗಡಿ, ಬಾರ್, ಮೆಕಾನಿಕ್ ಶಾಫ್, ಅಂಗಡಿ ಹಾಗೂ ನಾಲ್ಕೈದು ಚಿಕನ್ ಅಂಗಡಿಗಳಿವೆ. ಇಲ್ಲಿ ಪ್ಲಾಸ್ಟಿಕ್ ಲೋಟ, ಕರಗದ ಪ್ಲಾಸ್ಟಿಕ್ ಚೀಲ, ಕೋಳಿ ಅಂಗಡಿಯವರು ಬಿಸಾಡುವ ತ್ಯಾಜ್ಯದಿಂದ ಇಡೀ ವಾತಾವರಣ ಕಲುಷಿತವಾಗಿದ್ದು, ದುರ್ನಾತ ಬೀರುತ್ತಿದೆ. ಇದರಿಂದ ಹಂದಿ ಮತ್ತು ನಾಯಿಗಳ ಕಾಟ ಹೆಚ್ಚಾಗಿದೆ. ಬಹುತೇಕ ಹೋಟೆಲ್ಗಳು ಇಲ್ಲಿಯೇ ಇರುವುದರಿಂದ ಜನ ಮೂಗು ಹಿಡಿದೇ ಆಹಾರ ಸೇವಿಸಬೇಕಾದ ಪರಿಸ್ಥಿತಿ ಇದೆ.

ಚಿಕನ್ ತ್ಯಾಜ್ಯವನ್ನು ರಸ್ತೆಯ ಪಕ್ಕದಲ್ಲಿಯೇ ಎಸೆಯುವುದರಿಂದ ನಾಯಿಗಳ ಹಿಂಡು ಬೀಡು ಬಿಡುತ್ತಿವೆ. ಇವು ಸಾರ್ವಜನಿಕರ ಮೇಲೆ ದಾಳಿ ಮಾಡಿರುವ ಉದಾಹರಣೆಗಳೂ ಇವೆ.

ಶೌಚಾಲಯ ಮರೀಚಿಕೆ: ಪಟ್ಟಣ ಪಂಚಾಯಿತಿ ಸ್ಥಾನಮಾನ ಹೊಂದಲು ಬೇಕಾಗಿರುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಇಲ್ಲಿ ಸಾರ್ವಜನಿಕ ಶೌಚಾಲಯಗಳೇ ಮರೀಚಿಕೆಯಾಗಿವೆ. ಆದ್ದರಿಂದ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿ ಜಾತಿ ಮತ್ತು ಮುಸ್ಲಿಮರೇ ಹೆಚ್ಚಿರುವ ಪಟ್ಟಣದ ಬಹುಪಾಲು ಜನ ದಿನ ಬೆಳಗಾದರೆ ಇಲ್ಲಿಗೆ ಬಹಿರ್ದೆಸೆಗೆ ಹೋಗುವಂತಾಗಿದೆ.

ಕೆರೆ ಕೋಡಿ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರು ಭೂಮಿ ಪೂಜೆ ನೆರವೇರಿಸಿ ಎರಡು ತಿಂಗಳಾದರೂ ಕಾಮಗಾರಿ ಶುರುವಾಗಿಲ್ಲ. ಈಗಲಾದರೂ ತುರ್ತಾಗಿ ಶೌಚಾಲಯ ನಿರ್ಮಿಸಿ ಸಾರ್ವಜನಿಕರ ಸೇವೆಗೆ ಒದಗಿಸಲಿ ಎಂಬುದು ನಾಗರಿಕರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.