ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸದುರ್ಗ: ಮಳೆಗಾಗಿ ಪ್ರಾರ್ಥಿಸಿ ಮಾಸ್ತಮ್ಮ ದೇವಿಗೆ ಪೂಜೆ

Published 5 ಜುಲೈ 2024, 14:05 IST
Last Updated 5 ಜುಲೈ 2024, 14:05 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಬಾಗೂರಿನ ಹೊರವಲಯದಲ್ಲಿ ನೆಲೆಸಿರುವ ಮಾಸ್ತಮ್ಮ ದೇವಿಗೆ ಮಳೆಗಾಗಿ ಪ್ರಾರ್ಥಿಸಿ 101 ಬಿಂದಿಗೆ ಜಲಾಭಿಷೇಕ ಮಾಡಲಾಯಿತು.

ಬಾಗೂರಿನ ಗ್ರಾಮಸ್ಥರು ಶುಕ್ರವಾರ ಬೆಳಿಗ್ಗೆ ಪರಪ್ಪಸ್ವಾಮಿ ಮಠದ ಆವರಣದಿಂದ ಗಂಗಾಪೂಜೆ ಮಾಡಿ, ಗಂಗೆ ತಂದರು. ನಡೆ, ಮಡೆ ಮೇಲೆ ಬಂದ ನಂತರ ದೇವಿಗೆ 101 ಬಿಂದಿಗೆ ನೀರು ಅರ್ಪಿಸಲಾಯಿತು.

ಆನಿವಾಳದ ಚಂದ್ರಯ್ಯ ಅವರ ನೇತೃತ್ವದಲ್ಲಿ ನಡೆದ ಈ ಪೂಜೆಯಲ್ಲಿ ಅರ್ಚಕರಾದ ಪುನೀತ್ ಹಾಗೂ ರಾಜಪ್ಪ ಪಾಲ್ಗೊಂಡಿದ್ದರು. ನೂರಾರು ಜನರು ಮಳೆಗಾಗಿ ಪ್ರಾರ್ಥಿಸಿದರು. ಮಹಾ ಮಂಗಳಾರತಿ ನಂತರ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು.

‘ಮಾಸ್ತಮ್ಮ ಮಕ್ಕಳ ತಾಯಿ. ಬೇಡಿದ್ದನ್ನು ಶೀಘ್ರ ಕರುಣಿಸುತ್ತಾಳೆ. ಜಾತಿ ಭೇದವಿಲ್ಲದೆ ಎಲ್ಲರೂ ತಾಯಿ ಪೂಜೆ ಮಾಡುತ್ತಾರೆ. ಯಾವುದೇ ಫಸಲು ಹಾಕುವ ಮುನ್ನ ಹಾಗೂ ಕೊಯ್ಲಿನ ಸಂದರ್ಭದಲ್ಲಿ ತಾಯಿಗೆ ಮೊಸರನ್ನ ಎಡೆ ಅರ್ಪಿಸಿ, ಪೂಜೆ ಆದ ನಂತರ ರೈತರ ಕಾರ್ಯಗಳು ನಡೆಯುತ್ತವೆ. ಮೂರು ವರ್ಷಗಳ ಹಿಂದೆ ಪೂಜೆ ಮಾಡಿದ್ದು, ಉತ್ತಮ ಮಳೆಯಾಗಿತ್ತು. ಹಾಗಾಗಿ, ಈ ಬಾರಿಯೂ ವಿಶೇಷ ಪೂಜೆ ಮಾಡಲಾಗಿದೆ. ಮಳೆ ಉತ್ತಮವಾಗಿ, ಫಸಲು ಚೆನ್ನಾಗಿ ಬಂದರೆ ಸಾಕು’ ಎನ್ನುತ್ತಾರೆ ಬಾಗೂರಿನ ಪ್ರಗತಿಪರ ರೈತ ವೆಂಕಟೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT