ಚಿತ್ರದುರ್ಗ: ‘ಬಸ್ ನಿಲ್ದಾಣ ಹಾಗೂ ರೈಲುಗಳಲ್ಲಿನ ಶೌಚಾಲಯಗಳಲ್ಲಿ ಕಿಡಿಗೇಡಿಗಳ ಅಶ್ಲೀಲ ಬರಹ ಕಾಣುತ್ತೇವೆ. ತಂಬಾಕು ಜಿಗಿದು ಎಲ್ಲೆಂದರಲ್ಲಿ ಉಗಿದಿರುವುದನ್ನು ನೋಡುತ್ತೇವೆ. ಅದೇರೀತಿಯ ದೃಶ್ಯ ನಗರದಲ್ಲಿರುವ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲೂ ಕಾಣಸಿಗುತ್ತದೆ.

ದಶಕಗಳಿಂದಲೂ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ವಿದ್ಯಾ ಸಂಜೀವಿನಿಯಂತಿದ್ದ ಈ ಕಾಲೇಜಿನ ಆವರಣ ಇಂದು ತನ್ನ ಘನತೆ ಕಳೆದುಕೊಂಡಿದೆ. ಒಂದೆಡೆ ಕಟ್ಟಡ ಶಿಥಿಲಗೊಂಡಿದ್ದರೆ ಇನ್ನೊಂದೆಡೆ ಇರುವ ಕಟ್ಟಡದ ಸ್ವಚ್ಛತೆಯನ್ನೂ ಕಾಪಾಡಿಕೊಳ್ಳದ ಕಾರಣ ಇಡೀ ಆವರಣ ಕೊಳಕಿನಿಂದ ತುಂಬಿಹೋಗಿದೆ. ಕಾಲೇಜು ಕಟ್ಟಡ ಪ್ರವೇಶಿಸುತ್ತಿದ್ದಂತೆ ಸಿಮೆಂಟ್ ಉದುರಿದ ಚಾವಣಿ, ಜೇಡರ ಬಲೆಗಳು, ದೂಳುಮಯವಾದ ನೋಟಿಸ್ ಬೋರ್ಡ್ ಸ್ವಾಗತ ಕೋರುತ್ತದೆ.

ಮೊದಲ ಮಹಡಿಗೆ ತೆರಳಿದರೆ ಮೆಟ್ಟಿಲುಗಳ ಮೇಲೆ ಬಿದ್ದಿರುವ ಕಸ ಮನಸ್ಸಿಗೆ ಕಸಿವಿಸಿ ಉಂಟುಮಾಡುತ್ತದೆ. ಮೂಲೆಗಳಲ್ಲಿ ತಂಬಾಕು ಜಗಿದು ಉಗಿದಿರುವ ಕೆಂಪು ಬಣ್ಣ ಅಸಹ್ಯ ಮೂಡಿಸುತ್ತದೆ. ವಿದ್ಯಾರ್ಥಿಗಳು, ಸಿಬ್ಬಂದಿಯೇ ತಂಬಾಕು ಜಿಗಿದು ಉಗಿಯುತ್ತಾರಾ ಎಂಬ ಪ್ರಶ್ನೆ ಮೂಡುತ್ತದೆ. ಎಲ್ಲೆಂದರಲ್ಲಿ ಚೆಲ್ಲಾಡುತ್ತಿರುವ ಮುರಿದ ಕುರ್ಚಿ, ಮೇಜು, ಖಾಲಿ ಡಬ್ಬಿ ಅಲ್ಲಿಯ ಕಲುಷಿತ ವಾತಾವರಣವನ್ನು ತೆರೆದಿಡುತ್ತವೆ. ಒಂದು ಕ್ಷಣ ಇದು ಕಾಲೇಜಾ ಅಥವಾ ಗೋದಾಮಾ ಎಂಬ ಅನುಮಾನ ಮೂಡುತ್ತದೆ.

ಇನ್ನೂ ಅಸಹ್ಯ ಪಡುವ ವಿಷಯವೆಂದರೆ ಗೋಡೆಗಳ ಮೇಲೆ ಮೂಡಿರುವ ಅಶ್ಲೀಲ ಬರಹ. ಇಲ್ಲಿ ಬರೆಯಲಾರದಂತಹ ಕೆಟ್ಟ ಪದಗಳನ್ನು ಬರೆಯಲಾಗಿದೆ. ಪೆನ್ಸಿಲ್, ಪೆನ್ನು, ಬಣ್ಣದಲ್ಲಿ ಬರೆಯಲಾಗಿದೆ. ಇಲ್ಲಿಯವರೆಗೂ ಇದು ಪ್ರಾಚಾರ್ಯರು, ಮುಖ್ಯಶಿಕ್ಷಕರು, ಅಧ್ಯಾಪಕರು ಹಾಗೂ ಸಿಬ್ಬಂದಿಯ ಗಮನಕ್ಕೆ ಬಾರದಿರುವುದು ಆಶ್ಚರ್ಯ. ಗೊತ್ತಿದ್ದರೂ ಅದನ್ನು ಸ್ವಚ್ಛಗೊಳಿಸದೇ ಇರುವುದು ನಿಲಕ್ಷ್ಯತನದ ಪರಮಾವಧಿ ಎನಿಸುತ್ತದೆ.

‘ಇಲ್ಲಿ ಉಗಿಯುವವರು, ಅಶ್ಲೀಲ ಬರೆಯುವವರು ಯಾರು?’ ಎಂದು ಪ್ರಶ್ನಿಸಿದರೆ ಪಿಯು ಕಾಲೇಜು ಸಿಬ್ಬಂದಿ ಪ್ರೌಢಶಾಲೆ ವಿದ್ಯಾರ್ಥಿಗಳ ಮೇಲೆ ದೂರುತ್ತಾರೆ, ಪ್ರೌಢಶಾಲೆಯವರು ಪಿಯುಸಿ ವಿದ್ಯಾರ್ಥಿಗಳ ಮೇಲೆ ಹಾಕುತ್ತಾರೆ. ಅಲ್ಲೇ ಡಿಡಿಪಿಯು ಕಚೇರಿಯೂ ಇದ್ದು, ಕಚೇರಿಗೆ ಬರುವವರು ಹೀಗೆಲ್ಲಾ ಉಗಿದಿದ್ದಾರೆ ಎಂದೂ ಹೇಳುತ್ತಾರೆ.

‘1932ರಲ್ಲಿ ಪ್ರೌಢಶಾಲೆ, 1952ರಲ್ಲಿ ಪಿಯು ಕಾಲೇಜು ಆರಂಭವಾಯಿತು. ಮೊದಲು ಮುನ್ಸಿಪಲ್ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು. 1948ರಲ್ಲಿ ಕಾಲೇಜು ಕಟ್ಟಡ ಕಟ್ಟಿದ ನಂತರ ಇಲ್ಲಿಗೆ ಸ್ಥಳಾಂತರಿಸಲಾಯಿತು. ಇಲ್ಲಿ ಕಲಿತವರು ದೇಶ, ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಆದರೆ, ಈಗಿನ ಸ್ಥಿತಿ ನೋಡಿದರೆ ನೋವಾಗುತ್ತದೆ’ ಎಂದು ಪಿಯು ಕಾಲೇಜಿನ ಹಳೇ ವಿದ್ಯಾರ್ಥಿ ಸಿ.ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಿಯು ಕಾಲೇಜಿನಲ್ಲಿ ಸದ್ಯ 800, ಪ್ರೌಢಶಾಲೆಯಲ್ಲಿ 143 ವಿದ್ಯಾರ್ಥಿಗಳಿದ್ದಾರೆ. ಒಂದು ಕಾಲದಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದರು, ಆದರೆ, ಮೂಲಸೌಲಭ್ಯ, ಸ್ವಚ್ಛತೆ, ಗುಣಮಟ್ಟದ ಕೊರತೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಇಡೀ ಆವರಣದಲ್ಲಿ ಕಲಿಕೆಯ ವಾತಾವರಣ ಇಲ್ಲದ ಕಾರಣ ಫಲಿತಾಂಶವೂ ಕುಸಿಯುತ್ತಿದೆ.

ಕಾಲೇಜು ನಿರ್ಮಾಣಗೊಂಡು 75 ವರ್ಷವಾಗುತ್ತಿದ್ದರೂ ಕಟ್ಟಡ ದುರಸ್ತಿ ಕಂಡಿಲ್ಲ. ಇಡೀ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಚಾವಣಿಯ ಸಿಮೆಂಟ್ ಉದುರುತ್ತಿದೆ. 14 ಕೊಠಡಿಗಳ ಕಟ್ಟಡ ಅಪಾಯದ ಸ್ಥಿತಿಯಲ್ಲಿದ್ದು, ಯಾವಾಗ ಅಪಾಯ ಸಂಭವಿಸುತ್ತದೋ ಎಂಬ ಭಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಕಾಡುತ್ತಿದೆ. 2014ರಲ್ಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ತಿಯ ಅಗತ್ಯತೆ ಬಗ್ಗೆ ವರದಿ ನೀಡಿದ್ದಾರೆ. ಆದರೆ, ಇಲ್ಲಿಯವರೆಗೂ ಕಾಲೇಜು ಕಟ್ಟಡಕ್ಕೆ ಕಾಯಕಲ್ಪ ಒದಗಿ ಬಂದಿಲ್ಲ.

ಡಿಡಿಪಿಯು ಕಚೇರಿ ಸಿಬ್ಬಂದಿಗೆ ಭಯ

ಕಾಲೇಜು ಕಟ್ಟಡದ ಮೂಲೆಯ ಕೊಠಡಿಯಲ್ಲಿ ಡಿಡಿಪಿಯು ಕಚೇರಿ ಇದೆ. ಈಚೆಗೆ ಕೊಠಡಿ ಚಾವಣಿಯ ಸಿಮೆಂಟ್ ಕಿತ್ತು ಬಿದ್ದಿದ್ದು ಡಿಡಿಪಿಯು ಕೆ.ತಿಮ್ಮಯ್ಯ ಹಾಗೂ ಕಚೇರಿ ಸಿಬ್ಬಂದಿ ಭಯದಲ್ಲೇ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ‘ಕಾಲೇಜು ಕಟ್ಟಡ ದುರಸ್ತಿಗೆ ಒತ್ತಾಯಿಸಿ ಹಲವು ವರ್ಷಗಳಿಂದಲೂ ಇಲಾಖೆಗೆ ಮನವಿ ಮಾಡಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ದೊಡ್ಡ ಮನಸ್ಸು ಮಾಡಿ ಕಟ್ಟಡಕ್ಕೆ ಕಾಯಕಲ್ಪ ನೀಡಬೇಕು’ ಎಂದು ಡಿಡಿಪಿಯು ಮನವಿ ಮಾಡಿದರು.

‘ಕಾಂಪೌಂಡ್ ಮೂಲೆ’ಯೇ ಶೌಚಾಲಯ

ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ನೂರಾರು ವಿದ್ಯಾರ್ಥಿನಿಯರಿಗಾಗಿ ಕೇವಲ 1 ಶೌಚಾಲಯವಿದೆ. ಸರಿಯಾಗಿ ನೀರು ಪೂರೈಕೆ ಇಲ್ಲದ ಕಾರಣ ಹೆಣ್ಣು ಮಕ್ಕಳೂ ಪರದಾಡುವ ಸ್ಥಿತಿ ಇದೆ. ಗಂಡು ಮಕ್ಕಳಿಗೆ ಒಂದೂ ಶೌಚಾಲಯವಿಲ್ಲ ಅವರಿಗೆ ಕಾಲೇಜು ಕಾಂಪೌಂಡ್ ಮೂಲೆಯೇ ಶೌಚಾಲಯವಾಗಿದೆ. ‘ಶಾಲೆ ಕಾಲೇಜು ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಅಶ್ಲೀಲ ಬರಹವನ್ನು ಅಳಿಸಿ ಆ ರೀತಿ ಮುಂದೆ ಬರೆಯದಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಪಿಯು ಕಾಲೇಜು ಪ್ರಾಚಾರ್ಯ ನರಸಿಂಹಮೂರ್ತಿ ಪ್ರೌಢಶಾಲೆ ಮುಖ್ಯಶಿಕ್ಷಕ ಮೊಹಮ್ಮದ್ ಝಕಾವುಲ್ಲಾ ಹೇಳಿದರು. ‘ಇಷ್ಟು ವರ್ಷ ಯಾಕೆ ಮಾಡಿಸಿರಲಿಲ್ಲ?’ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.