ಚಳ್ಳಕೆರೆ: ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರುಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಚರಂಡಿ ಕಟ್ಟಿಕೊಂಡು ಗ್ರಾಮದ ಪ್ರಮುಖ ಬೀದಿಯಲ್ಲಿ ಕೊಳಚೆ ನೀರು ಸದಾ ಹರಿಯುತ್ತಿದ್ದು, ನಳದಲ್ಲಿ ಬರುವ ಕೊಳಚೆ ಮಿಶ್ರಿತ ನೀರನ್ನೇ ಕುಡಿಯುವಂತಾಗಿದೆ.

ಕಲುಷಿತ ನೀರು ಕುಡಿಯುವುದರಿಂದ ಜನರಲ್ಲಿ ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ. ಚರಂಡಿ ಕಟ್ಟಿಕೊಂಡು 2ರಿಂದ 3 ತಿಂಗಳಾಗಿದ್ದು, ಕೊಳಚೆ ನೀರರಿನಿಂದ ದುರ್ವಾಸನೆ ಬೀರುತ್ತಿದೆ. ಈ ನೀರಿನಿಂದ ಹೆಚ್ಚು ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಅವುಗಳಿಂದ ಕಚ್ಚಿಸಿಕೊಂಡು ಗ್ರಾಮಸ್ಥರು ಶೀತ, ಕೆಮ್ಮು, ಜ್ವರ ಹಾಗೂ ನೆಗಡಿಯಿಂದ ನರಳುವಂತಾಗಿದೆ ಎಂದು ಗ್ರಾಮದ ದೇವಿರಮ್ಮ ಜಯಮ್ಮ, ಕರಿಯಮ್ಮ ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಮುಖಂಡ ರಾಜ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಚರಂಡಿ ಸ್ವಚ್ಛ ಮಾಡಿಸದಿದ್ದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮದ ಸುಜಾತ, ನಾಗಮ್ಮ, ಮಂಜಕ್ಕ, ಲಕ್ಷ್ಮೀ, ಗೌರಮ್ಮ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.