ಹಿರಿಯೂರು: ವಾಣಿವಿಲಾಸ ಜಲಾಶಯದ ಕೋಡಿಯ ನೀರು ವೇದಾವತಿ ನದಿಯಲ್ಲಿ ತುಂಬಿ ಹರಿಯುತ್ತಿದ್ದು, ನೀರಿನ ಅಪವ್ಯಯ ತಪ್ಪಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೊಸಹಳ್ಳಿ ಬ್ಯಾರೇಜ್ನಿಂದ ಧರ್ಮಪುರ ಹೋಬಳಿಯ 8 ಕೆರೆಗಳಿಗೆ ತಡೆರಹಿತವಾಗಿ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಾಕೀತು ಮಾಡಿದರು.

ತಾಲ್ಲೂಕಿನ ಹೊಸಹಳ್ಳಿ ಸಮೀಪ ವೇದಾವತಿ ನದಿಗೆ ನಿರ್ಮಿಸಿರುವ ಬ್ಯಾರೇಜ್ನಿಂದ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲು ಗುತ್ತಿಗೆದಾರರು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ರೈತರು ಹೊಸಹಳ್ಳಿ ಪಂಪ್ಹೌಸ್ ಬಳಿ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಧರ್ಮಪುರ ಭಾಗದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಯೋಜನೆ ರೈತರಿಗೆ ಹೊಸ ಆಶಾಕಿರಣವಾಗಿದೆ. ಪ್ರತಿ ಹಳ್ಳಿಯ ಕೆರೆ ತುಂಬಿದರೆ ಆ ಭಾಗದ ಕೃಷಿಗೆ ಚೇತನ ಬರುತ್ತದೆ. ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ರೈತರ ಹಿತ ಕಾಯಲು ನಾನು ಮತ್ತು ನಮ್ಮ ಸರ್ಕಾರ ಸದಾ ಸಿದ್ಧವಿದೆ. ಅಧಿಕಾರಿಗಳು ನೀರು ತುಂಬಿಸುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸಬಾರದು’ ಎಂದು ಸಚಿವರು ತಿಳಿಸಿದರು.

‘ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತಾಗಿದೆ ನಮ್ಮ ಪರಿಸ್ಥಿತಿ. ಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ವೇದಾವತಿ ನದಿ ತುಂಬಿ ಹರಿಯುತ್ತಿದ್ದರೂ ನದಿಯ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ರೈತ ಕೃಷ್ಣಮೂರ್ತಿ ಆರೋಪಿಸಿದರು.

‘ಐದಾರು ದಿನಗಳಿಂದ ವಾಣಿವಿಲಾಸ ಜಲಾಶಯದ ಕೋಡಿಯಲ್ಲಿ 9,000ಕ್ಕೂ ಹೆಚ್ಚು ಕ್ಯುಸೆಕ್ ನೀರು ಹೊರಬರುತ್ತಿದೆ. ಅಣೆಕಟ್ಟೆಯ ಕೆಳಭಾಗದ ಎಲ್ಲ ಚೆಕ್ ಡ್ಯಾಂಗಳು, ಬ್ಯಾರೇಜ್ಗಳು ಭರ್ತಿಯಾಗಿವೆ. ಪ್ರಸ್ತುತ ಹೊಸಹಳ್ಳಿ ಬ್ಯಾರೇಜ್ನಿಂದ ಧರ್ಮಪುರ ಭಾಗದ ಕೆರೆಗಳಿಗೆ ಯಾವುದೇ ಸಮಸ್ಯೆ ಆಗದಂತೆ ನೀರು ಹರಿಸಬೇಕು. ರೈತರು ಪ್ರತಿಭಟನೆ ಮಾಡುವ ಅಥವಾ ನನ್ನಲ್ಲಿಗೆ ದೂರು ತರುವ ಪ್ರಸಂಗ ಬರಬಾರದು’ ಎಂದು ಸುಧಾಕರ್ ಎಚ್ಚರಿಸಿದರು.

‘ಹೊಸಹಳ್ಳಿ ಬ್ಯಾರೇಜ್ನಿಂದ ಕೆರೆಗಳಿಗೆ ನೀರು ಹರಿಸುವ ಕಾರ್ಯ ಆರಂಭವಾಗಿದೆ. ಈಗಾಗಲೇ 950 ಅಶ್ವಶಕ್ತಿಯ ಮೋಟಾರ್ಗಳನ್ನು ಚಾಲನೆ ಮಾಡಲಾಗಿದ್ದು, ಕೆರೆಗಳಿಗೆ ನೀರು ಲಿಫ್ಟ್ ಮಾಡಲಾಗುತ್ತಿದೆ. ಗೂಳ್ಯ, ಅಬ್ಬಿನಹೊಳೆ ಮತ್ತು ಈಶ್ವರಗೆರೆ ಕೆರೆಗೆ ನೀರು ತುಂಬಿಸುವ ಪೈಪ್ಲೈನ್ ಜಾಯಿಂಟ್ ಹಾಕಿದ ಭಾಗದಲ್ಲಿ ಸೋರಿಕೆ ಆಗಿತ್ತು. ಮಳೆ ಬಂದಿದ್ದರಿಂದ ಕರೆಂಟ್ ಇರಲಿಲ್ಲ. ಒಂದು ದಿನದ ಮಟ್ಟಿಗೆ ನೀರು ನಿಲ್ಲಿಸಲಾಗಿತ್ತು. ಈಗ ಎಲ್ಲವೂ ಸರಿಯಾಗಿದ್ದು, ಕೆರೆಗಳಿಗೆ ನೀರು ಹೋಗುತ್ತಿದೆ’ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಶ್ರವಣಗೆರೆ ತಿಪ್ಪೇಸ್ವಾಮಿ, ಅಮೃತೇಶ್ವರಸ್ವಾಮಿ, ಈರಲಿಂಗೇಗೌಡ, ಕೆ. ಪುಟ್ಟಸ್ವಾಮಿಗೌಡ, ಕೆ. ಕೃಷ್ಣಪ್ಪ, ಮಧುಸೂದನ್, ಬಂಡಿಈರಣ್ಣ, ಚಂದ್ರು, ವೆಂಕಟರಾಮು, ಲಕ್ಷ್ಮೀದೇವಿ, ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಕೃಷ್ಣ , ಪರಶುರಾಮ್, ಗೌಡಪ್ಪ, ಚಂದ್ರಣ್ಣ, ಚಿದಾನಂದ, ರಘುನಾಥ್, ಕಿರಣ್ ಗೌಡ, ಸದಾನಂದ, ಸುಬ್ಬಣ್ಣ, ಗೋವಿಂದ, ಕುಮಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.