ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಕುರುಬ ಸಮುದಾಯದ ಪಾದಯಾತ್ರೆಗೆ ಸಂಭ್ರಮದ ಸ್ವಾಗತ

ಹಿರಿಯೂರು ತಾಲ್ಲೂಕು ತಲುಪಿದ ಕುರುಬ ಸಮುದಾಯದ ಪಾದಯಾತ್ರೆ
Last Updated 24 ಜನವರಿ 2021, 15:43 IST
ಅಕ್ಷರ ಗಾತ್ರ

ಹಿರಿಯೂರು: ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ಸಂಜೆ 5.30ರ ವೇಳೆಗೆ ಹಿರಿಯೂರು ತಾಲ್ಲೂಕಿನ ಬುರುಜನರೊಪ್ಪ ಗ್ರಾಮಕ್ಕೆ ಪ್ರವೇಶಿಸಿತು.

ನೂರಾರು ಮಹಿಳೆಯರು ಹಣೆಯಲ್ಲಿ ಭಂಡಾರ ಧರಿಸಿ, ಕೈಯಲ್ಲಿ ಪೂರ್ಣಕುಂಭ ಹಿಡಿದು ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ, ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಸೋಮಲಿಂಗೇಶ್ವರ ಸ್ವಾಮೀಜಿ, ಮೈಲಾರದ ಗೊರವಯ್ಯ ರಾಮಪ್ಪ, ಮುತ್ತೇಶ್ವರಸ್ವಾಮೀಜಿ, ಮಾದಯ್ಯ ಸ್ವಾಮೀಜಿ, ಶರಭಯ್ಯ ಸ್ವಾಮೀಜಿ, ಸಂಗಯ್ಯ ಗುರುವಿನವರು, ರೇವಯ್ಯ ಒಡೆಯರ್, ಮಾಳಿಂಗರಾಯ ಒಡೆಯರ್, ಓಂಕಾರ ಒಡೆಯರ್ ಅವರನ್ನು ಭಕ್ತಿಯಿಂದ ಬರಮಾಡಿಕೊಂಡರು.

ಬುರುಜನರೊಪ್ಪ ಗಣಪತಿ ದೇವಸ್ಥಾನದ ಸಮೀಪ ಸಹಸ್ರಾರು ಭಕ್ತರೊಂದಿಗೆ ಸ್ವಾಮೀಜಿಗಳು ಬರುತ್ತಿದ್ದಂತೆಯೇ ಜನರ ಘೋಷಣೆ ಮುಗಿಲುಮುಟ್ಟಿತು. ‘ಎಸ್‌ಟಿ ಹೋರಾಟಕ್ಕೆ ಜಯವಾಗಲಿ’, ‘ಕುರುಬರ ನ್ಯಾಯಯುತ ಹಕ್ಕು ಜಾರಿಗೆ ಬರಲಿ’ ಎಂದು ಘೋಷಣೆ ಮೊಳಗಿಸಿದರು.

ಸಂಜೆ 7ಕ್ಕೆ ಪಾದಯಾತ್ರೆ ಐಮಂಗಲ ಗ್ರಾಮ ತಲುಪಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಹಾಂತೇಶ್, ಕಂದಿಕೆರೆ ಸುರೇಶ್ ಬಾಬು, ಕಾಂತರಾಜ್ ಹುಲಿ, ಎಸ್. ಗಿರಿಜಪ್ಪ, ಬಿ.ಟಿ. ಜಗದೀಶ್, ಕುಮಾರಗೌಡ, ಜೈರಾಂ ಪಾದಯಾತ್ರೆಯನ್ನು ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT