ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಅಡುಗೆ ಅನಿಲದ ಸಿಲಿಂಡರ್ ಸಿಡಿದು ಮಹಿಳೆ ಸಾವು, ನಾಲ್ವರಿಗೆ ಗಾಯ

Published 21 ಜನವರಿ 2024, 16:25 IST
Last Updated 21 ಜನವರಿ 2024, 16:25 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಮೀಪದ ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ಭಾನುವಾರ ಹೋಟೆಲ್‌ಗೆ ಬೆಂಕಿ ಹತ್ತಿಕೊಂಡು ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟಗೊಂಡು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಮೀಪದ ಬಿಜ್ಜೆನಾಳ್‌ ಗ್ರಾಮದ ಲಕ್ಷ್ಮಮ್ಮ (55) ಮೃತಪಟ್ಟವರು. ಎರಗಟ್ಟಿಹಳ್ಳಿ ಗ್ರಾಮದ ನೀಲಮ್ಮ, ಬಿಜ್ಜೆನಾಳ್‌ ಗ್ರಾಮದ ರೇಣುಕಮ್ಮ, ಹೊಸಹಳ್ಳಿ ಗ್ರಾಮದ ರಚನಾ, ಶಶಿಕಲಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಮೇಶ್ವರಪ್ಪ ಅವರು ಚಿಕ್ಕ ಗುಡಿಸಲಿನಲ್ಲಿ ಹೋಟೆಲ್‌ ನಡೆಸುತ್ತಿದ್ದರು. ಹೋಟೆಲ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪಕ್ಕದ ಶೆಡ್‌ನಲ್ಲಿ  ಅಡಿಕೆ ಸುಲಿಯುತ್ತಿದ್ದ ಈ ಮಹಿಳೆಯರು ಹೋಟೆಲ್‌ಗೆ ಬೆಂಕಿ ಹತ್ತಿರುವುದನ್ನು ನೋಡುತ್ತಾ ನಿಂತಿದ್ದಾಗ, ಇದಕ್ಕಿದ್ದಂತೆ ಹೋಟೆಲ್‌ನಲ್ಲಿದ್ದ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಗೊಂಡಿದೆ.

ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದರು.

ಡಿವೈಎಸ್‌ಪಿ ಅನಿಲ್‌ಕುಮಾರ್‌, ಸಿಪಿಐ ಚಿಕ್ಕಣ್ಣನವರ್‌, ಪಿಎಸ್‌ಐ ಎಂ.ಟಿ. ದೀಪು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT