ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ಅಣಬೆ ಆಸೆಗಾಗಿ ಡಿಆರ್‌ಡಿಒ ಪ್ರವೇಶಿಸಿದ ಯುವಕರು

Last Updated 7 ಸೆಪ್ಟೆಂಬರ್ 2020, 16:03 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಅಣಬೆ ಆಸೆಗಾಗಿ ಕುದಾಪುರ ಡಿಆರ್‌ಡಿಒ ಆವರಣವನ್ನು ಅಕ್ರಮವಾಗಿ ಪ್ರವೇಶಿಸಿದ್ದ ನಾಲ್ಕು ಜನ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರ್. ತಿಪ್ಪೇಸ್ವಾಮಿ, ಶಶಾಂಕ್, ತಿಪ್ಪೇಸ್ವಾಮಿ, ಪ್ರಕಾಶ್‌ ಎಂಬುವವರು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆವರಣವನ್ನು ಅಕ್ರಮವಾಗಿ ಪ್ರವೇಶಿಸಿ ಬಂಧನಕ್ಕೆ ಒಳಗಾಗಿದ್ದಾರೆ.

ಸಮೀಪದ ಕುದಾಪುರದ ಬಳಿಯ ಡಿಆರ್‌ಡಿಒ ಸಂಸ್ಥೆಯ ಸುತ್ತಲೂ 12 ಅಡಿ ಎತ್ತರದ ಭದ್ರತಾ ಗೋಡೆ ನಿರ್ಮಿಸಲಾಗಿದೆ. ಈ ಭಾಗದಲ್ಲಿ ಶನಿವಾರ ಉತ್ತಮವಾಗಿ ಮಳೆಯಾದ ಪ್ರಯುಕ್ತ ಸ್ಥಳೀಯ ಯುವಕರು ಭಾನುವಾರ ಈ ಕಾಂಪೌಂಡ್ ದಾಟಿ ಸಂಸ್ಥೆಯ ಆವರಣವನ್ನು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ.

ಡಿಆರ್‌ಡಿಒ ಭದ್ರತಾ ಗೋಡೆಯುದ್ದಕ್ಕೂ ಪ್ರತಿ ಅರ್ಧ ಕಿ.ಮೀಟರ್‌ಗೆ ಒಂದರಂತೆ ವಾಚ್‌ಟವರ್‌ಗಳ ಜತೆಗೆ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳು ದಿನದ 24ಗಂಟೆಯೂ ಕಾರ್ಯನಿರ್ವಹಿಸುತ್ತವೆ. ಹಾಗೂ ವಾಚ್‌ಟವರ್‌ಗಳಲ್ಲಿ ಪಾಳಿಯಂತೆ ಸೇನಾ ಯೋಧರ ಕಣ್ಗಾವಲಿದೆ. ಇಷ್ಟು ದೊಡ್ಡಮಟ್ಟದ ಭದ್ರತಾ ಕಣ್ಗಾವಲಿದ್ದರೂ ಇವುಗಳ ಅರಿವಿರದ ಯುವಕರು ಕಾಂಪೌಂಡ್ ಪ್ರವೇಶಿಸಿದ್ದಾರೆ. ಕಾವಲು ಕಾಯುತ್ತಿದ್ದ ಸೇನಾ ಯೋಧರು ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಅಣಬೆಗಳಿಗಾಗಿ ಬಂದಿರುವುದು ತಿಳಿದು ಬಂದೆ. ನಿಷೇಧಿತ ಪ್ರದೇಶಕ್ಕೆ ಅಕ್ರಮ ನುಸುಳುವಿಕೆ ಕಾಯ್ದೆಯಡಿಯಲ್ಲಿ ಯುವಕರ ವಿರುದ್ಧ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT