ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು: ಕರ್ತವ್ಯದಲ್ಲಿದ್ದ 4 ಮಂದಿ ಸಿಬ್ಬಂದಿ ಅಮಾನತು

Published 19 ಏಪ್ರಿಲ್ 2024, 13:51 IST
Last Updated 19 ಏಪ್ರಿಲ್ 2024, 13:51 IST
ಅಕ್ಷರ ಗಾತ್ರ

ಕಾಸರಗೋಡು: ವಯೋವೃದ್ಧರಿಗೆ ಮನೆಯಿಂದಲೇ ಮತಚಲಾಯಿಸುವ ಪ್ರಕ್ರಿಯೆ ವೇಳೆ ಕಾಸರಗೋಡು ಲೋಕಸಭೆ ಕ್ಷೇತ್ರದ ಕಲ್ಯಾಶೇರಿಯಲ್ಲಿ ವಂಚನೆ ಎಸಗಿದ ಆರೋಪದಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಕಲ್ಯಾಶೇರಿಯ ಪಾರಕವು ನಿವಾಸಿ 92 ವರ್ಷದ ದೇವಿ ಎಂಬುವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಅವರ ಬದಲಾಗಿ ಕಲ್ಯಾಶೇರಿಯ ಸಿಪಿಎಂ ಶಾಖೆಯ ಮಾಜಿ ಕಾರ್ಯದರ್ಶಿ ಮತ್ತು ಬೂತ್ ಏಜೆಂಟ್ ಗಣೇಶನ್ ಎಂಬುವರು ಮತದಾನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದನ್ನು ಪರಿಶೀಲಿಸಿ ಅಂದು ಕರ್ತವ್ಯದಲ್ಲಿದ್ದ 4 ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕಣ್ಣೂರು ಜಿಲ್ಲಾಧಿಕಾರಿ ಕೆ.ವಿಜಯನ್ ತಿಳಿಸಿದರು.

ವಿಶೇಷ ಮತದಾನ ಅಧಿಕಾರಿ, ವಿಡಿಯೊಗ್ರಾಫರ್ ಸಹಿತ 4 ಮಂದಿಯನ್ನು ಅಮಾನತುಗೊಳಿಸಲಾಗಿದೆ. ಮುಂದಿನ ಕ್ರಮಗಳಿಗಾಗಿ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕಣ್ಣಪುರಂ ಠಾಣೆಯಲ್ಲೂ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT