ಉಪ್ಪಿನಂಗಡಿ: ಕೆಲ ವರ್ಷಗಳಿಂದ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ವತಿಯಿಂದ ಕಡಿದು ಹಾಕಲಾಗಿದ್ದು, ಮರದ ದಿಮ್ಮಿಗಳು, ರೆಂಬೆ, ಕೊಂಬೆಗಳನ್ನು ತೆರವು ಮಾಡದೆ ಹಾಗೆಯೇ ಬಿಡಲಾಗಿದೆ. ಇದರಿಂದ ಮರದ ದಿಮ್ಮಿಗಳು ರಸ್ತೆ ಬದಿಯಲ್ಲೇ ಬಿದ್ದುಕೊಂಡಿದ್ದು ಅವಘಡಗಳಿಗೆ ಆಹ್ವಾನ ನೀಡುತ್ತಿದೆ.

ರಾಷ್ಟ್ರೀಯ ಹೆದ್ದಾರಿ, ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಸಹಿತ ರಸ್ತೆ ಬದಿಯಲ್ಲಿ ಅಪಾಯಕಾರಿ ಮರಗಳು ಆಗಾಗ್ಗೆ ಮುರಿದು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಬಿದ್ದು, ಹಲವು ಸಾವು-ನೋವು ಸಂಭವಿತ್ತು. ಈ ಹಿನ್ನೆಲೆಯಲ್ಲಿ ಇವುಗಳ ತೆರವು ಬಗ್ಗೆ ಗ್ರಾಮ ಸಭೆ, ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಅದರಂತೆ ಗ್ರಾಮ ಪಂಚಾಯಿತಿಗಳು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದವು. ಆದರೆ ಮರಗಳ ತೆರವು ಆಗಿರಲಿಲ್ಲ.

ಮೇ 28ರಂದು ಉಪ್ಪಿನಂಗಡಿಯಲ್ಲಿ ನಡೆದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ಸಾರ್ವಜನಿಕರು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಶಾಸಕರು ಮತ್ತು ಉಪವಿಭಾಗಾಧಿಕಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಪಾಯಕಾರಿ ಮರಗಳ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಇದಾದ 2 ದಿನಗಳ ಬಳಿಕ ಕೆಲ ಕಡೆಯಲ್ಲಿ ಅಪಾಯಕಾರಿ ಮರಗಳ ಕಡಿದು ಹಾಕಲಾಗಿತ್ತು. ಆದರೆ ಅವುಗಳ ತೆರವು ಮಾಡದ ಕಾರಣ ರಸ್ತೆ ಅಂಚಿನಲ್ಲಿ ಬಿದ್ದಿವೆ.

ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಕೊಯಿಲ ಸಮೀಪ ಪೂರಿಂಗ ಬಳಿ ರಸ್ತೆ ಬದಿಯಲ್ಲಿ ಅಪಾಯಕಾರಿ ಮರಗಳನ್ನು ಕಡಿದು ಉರುಳಿಸಲಾಗಿದೆ. ಆದರೆ ಅದು ರಸ್ತೆಯಲ್ಲೇ ಬಿದ್ದಿವೆ. ಎರಡು ವಾಹನಗಳು ಮುಖಾಮುಖಿಯಾಗಿ ತುಸು ಆಯ ತಪ್ಪಿದರೆ ಅಪಘಾತ ಆಗುವುದರಲ್ಲಿ ಸಂಶಯವೇ ಇಲ್ಲ. ಆದರೂ ಇಲ್ಲಿ ಪಾದಚಾರಿಗಳು ನಡೆದು ಹೋಗಲು ದಾರಿಯೇ ಇಲ್ಲದಂತಾಗಿ ರಸ್ತೆಯಲ್ಲೇ ಹೋಗಬೇಕಾಗಿದೆ.

ಮೇ 30ರಂದು ಭಾರಿ ಗಾಳಿ-ಮಳೆ ಸಂದರ್ಭದಲ್ಲಿ ಉಪ್ಪಿನಂಗಡಿ-ಹಿರೇಬಬಂಡಾಡಿ-ಕೊಯಿಲ ರಾಜ್ಯ ಹೆದ್ದಾರಿಯಲ್ಲಿ ದಾಸರಮೂಲೆ ಬಳಿ ತಿರುವಿನಲ್ಲಿ ಸುಮಾರು 60 ಮೀಟರ್ ದೂರದ ತನಕ ರಸ್ತೆ ಬದಿಯಲ್ಲಿ ಭೂಕುಸಿತ ಉಂಟಾಗಿದೆ. ಇದರ ಜತೆಗೆ ಬೃಹತ್ ಮರ ಬುಡ ಸಮೇತ ನೆಲಕ್ಕುರುಳಿದೆ. ಇದರ ರೆಂಬೆ, ಕೊಂಬೆಗಳು ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಇಲ್ಲಿ ಈಗಾಗಲೇ ಎರಡು ಅಪಘಾತಗಳು ಸಂಭವಿಸಿದ್ದು, ಸಣ್ಣ-ಪುಟ್ಟ ಗಾಯಗಳಾಗಿವೆ.

ಉತ್ತಮ ಜಾತಿ ಮರಗಳ ಸಾಗಣೆ:

ಇದೇ ರಸ್ತೆಯ ನೂಜಿ, ನೆಹರೂ ತೋಟ ಬಳಿ ಕಡಿಯಲಾದ ಬೃಹತ್ ಗಾತ್ರದ ಸಾಗುವಾನಿ, ಅಕೇಶಿಯಾ ಮರಗಳನ್ನು ದಿಮ್ಮಿಗಳನ್ನಾಗಿ ಮಾಡಿ ಸಾಗಿಸಲಾಗಿದೆ. ಆದರೆ ರೆಂಬೆ-ಕೊಂಬೆಗಳು ರಸ್ತೆ ಬದಿಯಲ್ಲಿ ಹಾಗೆಯೇ ಉಳಿಸಲಾಗಿದೆ. ಉಪ್ಪಿನಂಗಡಿ ಪೇಟೆಯಲ್ಲಿ ಮಾದರಿ ಶಾಲಾ ಬಳಿ ಮತ್ತು ಅಂಗನವಾಡಿ ಬದಿ ಇರುವ ಮರಗಳ ತೆರವು ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಬದಿಯ ಕೂಟೇಲು ಬಳಿ 4 ಬೃಹತ್ ಗಾತ್ರದ ಮರಗಳು, ಗುಡ್ಡ ಸಹಿತ ರಸ್ತೆಗೆ ಉರುಳಿ ಬಿದ್ದಿದ್ದು, ಅವುಗಳನ್ನು ಹಾಗೆಯೇ ಬಿಡಲಾಗಿದೆ.

ಮರಗಳ ತೆರವು ಯಾರ ಹೊಣೆ?

‘ಶಾಸಕರು ಮತ್ತು ಉಪವಿಭಾಗಾಧಿಕಾರಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮರಗಳ ತೆರವಿಗೆ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ಕೆಲವೊಂದು ಕಡೆ ತೆಗೆದು ಇನ್ನೂ ಕೆಲವು ಕಡೆ ಬಿಟ್ಟಿದ್ದಾರೆ’ ಎಂದು ಉಪ್ಪಿನಂಗಡಿ ಸಾಮಾಜಿಕ ಕಾರ್ಯಕರ್ತ ಕೈಲಾರ ರಾಜಗೋಪಾಲ್ ಭಟ್ ದೂರಿದ್ದಾರೆ.

ಶಾಸಕರು ಉಪ ವಿಭಾಗಾಧಿಕಾರಿಗಳ ಮಾತಿಗೂ ಬೆಲೆ ಇಲ್ಲವೇ?

ಅರಣ್ಯ ಇಲಾಖೆಯವರು ಪಿಡಬ್ಲ್ಯೂಡಿ ಇಲಾಖೆ ಕಡೆ ಬೊಟ್ಟು ಮಾಡುತ್ತಾರೆ. ಹಾಗಾದರೆ ಇವುಗಳನ್ನು ತೆರವು ಮಾಡಬೇಕಾದವರು ಯಾರು? ಎನ್ನುವ ಪ್ರಶ್ನೆ ಕಾಡತೊಡಗಿದ್ದು ಯಾರೇ ಆದರೂ ಅವುಗಳನ್ನು ತಕ್ಷಣ ತೆರವು ಮಾಡಿ ಸಂಭವನೀಯ ಅವಘಡವನ್ನು ತಪ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.