ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ₹3.90 ಲಕ್ಷ ಮೌಲ್ಯದ ಮಾದಕ ವಸ್ತು ವಶ

Last Updated 13 ಜೂನ್ 2021, 13:39 IST
ಅಕ್ಷರ ಗಾತ್ರ

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಬೆಂಗಳೂರಿನಲ್ಲಿ ಖರೀದಿಸಿ ಕಾಸರಗೋಡಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕೊಣಾಜೆ ಠಾಣಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಕಾಸರಗೋಡಿನ ಶಫೀಕ್‌‌ ಹಾಗೂ ಅಲ್ತಾಫ್‌‌ ಬಂಧಿತರು. ಆರೋಪಿಗಳಿಂದ ಒಟ್ಟು 65 ಗ್ರಾಂ ತೂಕದ ಸುಮಾರು ₹ 3.90 ಲಕ್ಷ ಮೌಲ್ಯದ ಎಂಡಿಎಂ, ಸ್ವಿಫ್ಟ್‌ ಕಾರು, ಸುಮಾರು ₹ 11 ಸಾವಿರ ಮೌಲ್ಯದ 4 ಮೊಬೈಲ್‌‌‌‌ ಸಹಿತ ಒಟ್ಟು ₹ 9.01 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಪ್ಪಿನಂಗಡಿ ಕಡೆಯಿಂದ ಕೇರಳ ರಾಜ್ಯಕ್ಕೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಅಕ್ರಮವಾಗಿ ಮೆಲ್ಕಾರ್‌‌‌ ಮುಡಿಪು, ನಾಟೆಕಲ್‌‌‌ ರಸ್ತೆ ಮಾರ್ಗವಾಗಿ ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ, ಪಿಎಸ್‌‌ಐ ಮಲ್ಲಿಕಾರ್ಜುನ ಬಿರದಾರ ಹಾಗೂ ಸಿಬ್ಬಂದಿ ಮಂಜನಾಡಿ ಗ್ರಾಮದ ನಾಟೆಕಲ್‌‌‌ ವಿಜಯನಗರ ಎಂಬಲ್ಲಿ ಆರೋಪಿಗಳ ಕಾರನ್ನು ತಡೆದು ನಿಲ್ಲಿಸಿದರು.

ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್‌‌‌ ಮಾರ್ಗದರ್ಶನದಲ್ಲಿ, ಎಸಿಪಿ ನಟರಾಜ್‌‌‌, ಕೊಣಾಜೆ ಪೊಲೀಸ್‌‌ ನಿರೀಕ್ಷಕ ಪ್ರಕಾಶ್‌‌ ದೇವಾಡಿಗ, ಪಿಎಸ್‌‌‌ಐ ಮಲ್ಲಿಕಾರ್ಜುನ ಬಿರದಾರ, ಶರಣಪ್ಪ ಭಂಡಾರಿ, ಎಎಸ್‌ಐ ಮೋಹನ್‌‌‌, ಸಿಬ್ಬಂದಿ ನಾಗರಾಜ ಲಮಾಣಿ, ಅಶೋಕ್‌‌, ಪುರುಷೋತ್ತಮ, ಮಂಜುನಾಥ್‌‌‌, ಶಿವಕುಮಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT