ಮಂಗಳೂರು: ವಿದೇಶಿ ವ್ಯಾಪಾರ ನಿರ್ದೇಶನಾಲಯದ ಐಟಿಸಿ (ಎಚ್.ಎಸ್) ಕೋಡ್ 20081920 ಅಡಿಯಲ್ಲಿ ಪರಿಗಣಿತವಾಗಿದ್ದ ಹುರಿದ ಅಡಿಕೆಯ ಅನಿರ್ಬಂಧಿತ ವ್ಯಾಪಾರವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

ಈ ಮೂಲಕ ‘ರೋಸ್ಟೆಡ್ ನಟ್ಸ್ ಮತ್ತು ಸೀಡ್ಸ್’ ಹೆಸರಿನಲ್ಲಿ ಆಮದಾಗುತ್ತಿದ್ದ ಅಡಿಕೆಗೆ ನಿರ್ಬಂಧ ವಿಧಿಸಲಾಗಿದೆ.

ಈ ಸಂಬಂಧ ಏಪ್ರಿಲ್ 2ರಂದು ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ. ಹುರಿದ ಅಡಿಕೆಯನ್ನು ‘ಉಚಿತ’ ವಿಭಾಗದಿಂದ ‘ನಿಷೇಧಿತ’ ವಿಭಾಗಕ್ಕೆ ಪರಿಷ್ಕರಿಸಿ ವರ್ಗೀಕರಿಸಲಾಗಿದೆ. ಆದರೆ, ಕನಿಷ್ಠ ಆಮದು ದರವನ್ನು ಪ್ರತಿ ಕೆ.ಜಿ.ಗೆ ₹351 ನಿಗದಿಪಡಿಸಿದ್ದು, ಆಮದು ಮಾಡುವ ಅಡಿಕೆಯ ವೆಚ್ಚ, ವಿಮೆ ಮತ್ತು ಸರಕು ಸಾಗಣೆ ಮೌಲ್ಯವು ಪ್ರತಿ ಕೆ.ಜಿ.ಗೆ ₹351 ಮತ್ತು ಅದಕ್ಕಿಂತ ಹೆಚ್ಚಿದ್ದರೆ, ಶೇ 100 ರಫ್ತು ಆಧಾರಿತ ಘಟಕಗಳು, ಎಸ್ಇಝಡ್ನಲ್ಲಿರುವ ಘಟಕಗಳು ಮತ್ತು ಮುಂಗಡ ಅಧಿಕಾರ ಯೋಜನೆಯಡಿಯಲ್ಲಿ ಆಮದು ಮಾಡಿಕೊಳ್ಳುವ ಅಡಿಕೆಗೆ ಕನಿಷ್ಠ ಆಮದು ಬೆಲೆಯ ಷರತ್ತುಗಳು ಅನ್ವಯವಾಗದು ಎಂದು ಕ್ಯಾಂಪ್ಕೊ ತಿಳಿಸಿದೆ.

ಕೆಲವು ತಿಂಗಳುಗಳ ಹಿಂದೆ ಹುರಿದ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಗೆ ಬಂದಿದ್ದರ ಪರಿಣಾಮ ಪಟೋರ ಮತ್ತಿತರ ಕೆಳದರ್ಜೆಯ ಅಡಿಕೆಯ ದರ ಕಡಿಮೆಯಾಗಿರುವ ಜೊತೆಗೆ ಬೇಡಿಕೆ ಕುಂಠಿತವಾಗಿತ್ತು. ಕೇಂದ್ರ ಸರ್ಕಾರದ ಕ್ರಮದಿಂದ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.